
ನೀವು ಪ್ರಾಣಿಗಳ ಜೊತೆ ಕಣ್ಣಾಮುಚ್ಚಾಲೆ ಆಡಿದ್ದೀರಾ? ಅದ್ರಲ್ಲೂ ನಿಮ್ಮ ಮನೆಯ ಮುದ್ದಿನ ನಾಯಿಯೊಂದಿಗೆ ಹೈಡ್ ಅಂಡ್ ಸೀಕ್ ಆಟವಾಡಿದ್ದೀರಾ?ಆದರೆ ಮಹಿಳೆಯೊಬ್ಬರು ತಮ್ಮ ಮುದ್ದಿನ ಸಾಕು ನಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಡಿರುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದು ಮೆಚ್ಚುಗೆ ಗಳಿಸಿದೆ.
ಆರ್ ಪಿ ಜಿ ಎಂಟರ್ ಪ್ರೈಸಸ್ ಅಧ್ಯಕ್ಷರಾದ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿದ್ದು ವೈರಲ್ ಆಗಿದೆ. ರೂಂನ ಬಾಗಿಲ ಹಿಂದೆ ಮಹಿಳೆ ಅವಿತುಕೊಂಡಿರುತ್ತಾರೆ. ನಾಯಿ ಮಹಿಳೆಯನ್ನ ಹುಡುಕಲು ಅನೇಕ ಬಾರಿ ರೂಂಗೆ ಬಂದು ಹುಡುಕಾಡುತ್ತದೆ. ಕೊನೆಗೆ ಬಾಗಿಲ ಹಿಂದೆ ಅವಿತಿರುವ ಮಹಿಳೆಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗುತ್ತದೆ. ಈ ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.