ಅನೇಕ ಜನರು ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಕುಟುಂಬದ ಸದಸ್ಯರಿಗೆ ನೀಡುವ ಅದೇ ಪ್ರೀತಿ, ಗೌರವ ಮತ್ತು ಸೌಕರ್ಯವನ್ನು ಅವುಗಳಿಗೂ ನೀಡುತ್ತಾರೆ. ಅಂತಹ ಓರ್ವ ಮಹಿಳೆ ತನ್ನ ಸಾಕಿದ ನಾಯಿಗೆ ಸೀಮಂತ ಮಾಡಿದ್ದಾರೆ.
ಈ ವೀಡಿಯೊವನ್ನು ನಾಯಿಯ ಮಾಲೀಕರಾದ ಸುಜಾತಾ ಭಾರತಿ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಮೋಹನಾಂಗಿಗಾಗಿ ಬೇಬಿ ಶವರ್” ಎಂದು ಶೀರ್ಷಿಕೆ ನೀಡಿದ್ದಾರೆ.
ತಾನು ಪ್ರೀತಿ, ಕಾಳಜಿಯಿಂದ ಸಾಕಿದ ಪ್ರೀತಿಯ ನಾಯಿಗೆ ಸೀಮಂತ ಮಾಡಿರುವ ಮಹಿಳೆಯ ಮಮತೆಯನ್ನು ಹಲವರು ಮೆಚ್ಚಿ ಕೊಂಡಾಡಿದ್ದಾರೆ.
https://youtu.be/tVuepA3v6PE