ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಲ್ಲ ಮೈನವಿರೇಳಿಸುವ ಸ್ಟಂಟ್ಗಳನ್ನು ಮಾಡುವ ಮಹಿಳೆಯೊಬ್ಬರು ನೆಟ್ಟಿಗರು ತಮ್ಮ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.
ಜಿಮ್ನಾಸ್ಟಿಕ್ಸ್ನ ಟೈಟ್ರೋಪ್ ಅಥವಾ ಟ್ರಜೀಜ಼್ಗಳಂಥ ಕಠಿಣಾತಿಕಠಿಣ ಸ್ಟಂಟ್ಗಳನ್ನು ಮಾಡುವುದಲ್ಲದೇ, ತನ್ನ ಕೂದಲನ್ನು ಗಾಳಿಯಲ್ಲಿ ತೇಲಿಬಿಟ್ಟು, ನಂಬಲಸಾಧ್ಯವಾದಂಥ ಒಂದಷ್ಟು ಹೊಸ ಸ್ಟಂಟ್ಗಳನ್ನೂ ಸಹ ಈಕೆ ಮಾಡಿದ್ದಾರೆ.
ಸಿದ್ದರಾಮಯ್ಯ ಹೆಂಡ ಕುಡಿದಾಗ ಒಂದು ಮಾತು, ಕುಡಿಯದೇ ಇದ್ದಾಗ ಒಂದು ಮಾತು ಆಡ್ತಾರೆ; ವಿಪಕ್ಷ ನಾಯಕನ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಚೋಲೆ ಜೇಯ್ನ್ ಹೆಸರಿನ ಈ ಮಹಿಳೆ, ವೃತ್ತಿಪರ ಹೇರ್ಹ್ಯಾಂಗರ್, ನೃತಪಟು ಹಾಗೂ ಏರಿಯಲಿಸ್ಟ್ ಆಗಿದ್ದಾರೆ. ಅಬ್ಬಬ್ಬಾ ಎನಿಸುವಂಥ ಅನೇಕ ಸ್ಟಂಟ್ಗಳನ್ನು ಚೋಲೆ ಇನ್ಸ್ಟಾಗ್ರಾಂನಲ್ಲಿರುವ ತಮ್ಮ ಪ್ರೊಫೈಲ್ನಲ್ಲಿ ಶೇರ್ ಮಾಡಿಕೊಂಡು ಬಂದಿದ್ದಾರೆ.
ಅಭ್ಯಾಸ ಮಾಡುವ ಸಂದರ್ಭದಲ್ಲಿ ಮಾಡಿಕೊಂಡ ವಿಡಿಯೋವೊಂದನ್ನು ಚೋಲೆ ಇಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://www.youtube.com/watch?v=vcqh__4NT8g