
ಟ್ರಾಫಿಕ್‌ನಲ್ಲಿ ಸಿಲುಕಿರುವಾಗ ತಮ್ಮ ಸಮಯವನ್ನು ಕ್ರಿಯೇಟಿವ್ ಆಗಿ ಬಳಸಿಕೊಳ್ಳುವ ಬೆಂಗಳೂರಿಗರ ಕಥೆಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗೆ ಬರ್ತಾ ಇರುತ್ತೆ. ಇದೀಗ ಇಂಟರ್ನೆಟ್‌ನಲ್ಲಿ ಪೋಸ್ಟ್ ಒಂದು ಸಾಕಷ್ಟು ವೈರಲ್ ಆಗಿದ್ದು ಮಹಿಳೆಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ತನ್ನ ಸಮಯವನ್ನು ಯೂಸ್‌ಫುಲ್ ಆಗಿ ಬಳಸಿರುವುದನ್ನು ತೋರಿಸುತ್ತದೆ.
ಪ್ರಿಯಾ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು), ಇದು ಕಾರಿನ ಸೀಟಿನ ಮೇಲೆ ಇಟ್ಟಿರುವ ಸಿಪ್ಪೆ ಸುಲಿದ ಅವರೆಕಾಳುಗಳ ಪ್ಯಾಕೆಟ್‌ಗಳ ಫೋಟೋ ಆಗಿದೆ. “ಪೀಕ್ ಟ್ರಾಫಿಕ್ ಟೈಮ್‌ನಲ್ಲಿ ಪ್ರೊಡ್ಯುಸರ್ ಆಗಿರುವುದು” ಎಂಬ ಕ್ಯಾಪ್ಶನ್ ಅನ್ನು ಬರೆಯಲಾಗಿದೆ.
ಈ ಪೋಸ್ಟ್ ಕೆಲವೇ ಟೈಮ್‌ನಲ್ಲಿ ಹೆಚ್ಚಿನ ಶೇರ್ ಆಗಿದೆ. ಇತರ ಯೂಸರ್ಸ್ ಸಂತೋಷದ ರಿಯಾಕ್ಷನ್‌ನ್ನು ನೀಡಿದ್ದಾರೆ. ಒಬ್ಬ ಬಳಕೆದಾರನು ತಮಾಷೆಯಾಗಿ, “ಇದನ್ನು ನನ್ನ ಬಾಸ್‌ಗೆ ಕಳುಹಿಸುತ್ತಿದ್ದೇನೆ !” ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ, ಟ್ರಾಫಿಕ್‌ನಲ್ಲಿ ಸಿಲುಕಿದ್ದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು.