ಮುಂಬೈ: ಸ್ವರಾಜ್ ಎಕ್ಸ್ ಪ್ರೆಸ್ ರೈಲಿನ ವಾಶ್ ರೂಂನಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ರೋಡ್ ರೈಲು ನಿಲ್ದಾಣದಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಪ್ರಕರಣದಲ್ಲಿ, 20 ವರ್ಷದ ಮಹಿಳೆಯ ಶವ ಕಂಡು ಬಂದಿದೆ. ಸ್ವರಾಜ್ ಎಕ್ಸ್ ಪ್ರೆಸ್ ರೈಲಿನ ವಾಶ್ ರೂಮ್ ನಲ್ಲಿ ಕುತ್ತಿಗೆಗೆ ಬಟ್ಟೆ ಕಟ್ಟಿಕೊಂಡು ರೀತಿಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಂದ್ರಾ ರೈಲು ನಿಲ್ದಾಣದಿಂದ ಜಮ್ಮು ತಾವಿಗೆ ಹೊರಟಿದ್ದ ರೈಲಿನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದಳು. ಪ್ರಯಾಣ ಪ್ರಾರಂಭವಾದ ನಂತರ, ಮಹಿಳೆ ವಾಶ್ ರೂಮ್ ಗೆ ಹೋದಳು, ಆದರೆ ಪ್ರಯಾಣಿಕರು ನಂತರ ಅವಳು ತನ್ನ ಆಸನಕ್ಕೆ ಹಿಂತಿರುಗದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದು, ನಂತರ ವಾಶ್ ರೂಮ್ ನ ಬಾಗಿಲು ಒಡೆದು ನೋಡಿದಾಗ ಒಳಗೆ ಆಕೆಯ ಶವ ಪತ್ತೆಯಾಗಿದೆ.
ಆಕೆಯ ಆಧಾರ್ ಕಾರ್ಡ್ ಆಧಾರದ ಮೇಲೆ ಆಕೆಯನ್ನು ಬಿಹಾರದ ನಿವಾಸಿ ಆರತಿ ಕುಮಾರಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ದಹಾನುದಲ್ಲಿರುವ ಕಾಟೇಜ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.