
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಆಹಾರ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ಜೊಮಾಟೊದಂತಹ ಆನ್ಲೈನ್ ಅಪ್ಲಿಕೇಷನ್ ಮೂಲಕ ಆಹಾರ ಆರ್ಡರ್ ಮಾಡ್ತಿದ್ದಾರೆ. ಜೊಮಾಟೊದಲ್ಲಿ ಆಹಾರ ಆರ್ಡರ್ ಮಾಡಿದ ಮಹಿಳೆಯೊಬ್ಬಳಿಗೆ ಆರ್ಡರ್ ರದ್ದು ಮಾಡಿದ್ದು ದುಬಾರಿಯಾಗಿದೆ.
ಮಹಿಳೆ ಜೊಮಾಟೊ ಅಪ್ಲಿಕೇಷನ್ ಮೂಲಕ ಆಹಾರ ಆರ್ಡರ್ ಮಾಡಿದ್ದಾಳೆ. ಡಿಲೆವರಿ ಬಾಯ್ ಮನೆಗೆ ಬರ್ತಿದ್ದಂತೆ ಆರ್ಡರ್ ಕ್ಯಾನ್ಸಲ್ ಮಾಡಿದ್ದಾಳೆ. ಇದ್ರಿಂದ ಕೋಪಗೊಂಡ ಡಿಲೆವರಿ ಬಾಯ್ ಆಕೆ ಮುಖಕ್ಕೆ ಪಂಚ್ ನೀಡಿದ್ದಾನೆ. ಮಹಿಳೆ ಮೂಗಿನಿಂದ ರಕ್ತ ಬಂದಿದೆ. ವಿಡಿಯೋ ಮೂಲಕ ಮಹಿಳೆ ಘಟನೆಯನ್ನು ವಿವರಿಸಿದ್ದಾಳೆ.
ಅಗ್ಗದ ಬೆಲೆಗೆ LPG ಸಿಲಿಂಡರ್ ಖರೀದಿಗೆ ಇಲ್ಲಿದೆ ಅವಕಾಶ
ಘಟನೆ ನಂತ್ರ ಡಿಲೆವರಿ ಬಾಯ್ ಅಲ್ಲಿಂದ ಓಡಿ ಹೋಗಿದ್ದಾನಂತೆ. ಭಯಗೊಂಡ ಮಹಿಳೆ ಸಹಾಯಕ್ಕೆ ಯಾರೂ ಬರದ ಕಾರಣ, ಆಸ್ಪತ್ರೆಗ ಹೋದ ಮಹಿಳೆ ಚಿಕಿತ್ಸೆ ಪಡೆದಿದ್ದಾಳೆ. ಈ ಬಗ್ಗೆ ದೂರು ದಾಖಲಾಗಿದ್ದು, ಆದಷ್ಟು ಬೇಗ ಆರೋಪಿ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.