
ಧಾರವಾಡ: ಕಸ ಹಾಕುವ ವಿಚಾರಕ್ಕೆ ಮಹಿಳೆ ಕೊಲೆ ಮಾಡಿದ 5 ಮಂದಿ ಹಂತಕರಿಗೆ ಧಾರವಾಡದ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
2016ರಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಜುನಾಥ ಕದಂ, ಬಸವರಾಜ ಕದಂ, ಯಲ್ಲಪ್ಪ ಕದಂ, ಲಲಿತಾ ಕದಂ, ಕಮಲಾ ಕದಂ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಧಾರವಾಡದ ಹಾವೇರಪೇಟಿ ಕುರುಬರ ಓಣಿಯಲ್ಲಿ ಮನೆಯ ಹಿಂದೆ ಕಸ ಹಾಕುವ ವಿಚಾರಕ್ಕೆ ಜಗಳವಾಗಿ ಕೊಡಲಿಯಿಂದ ಕೊಚ್ಚಿ ಕಟ್ಟಿಗೆಯಿಂದ ಹೊಡೆದು ವೃದ್ಧೆ ಗಂಗಮ್ಮ ಅವರನ್ನು ಕೊಲೆ ಮಾಡಿದ್ದರು.