alex Certify ಚಿಕ್ಕಪ್ಪನ ಮಗನನ್ನೇ ಮದುವೆಯಾದ ಪುತ್ರಿ, ಕುಟುಂಬದವರ ಕಠಿಣ ನಿರ್ಧಾರ: ಸಂಬಂಧ ಕಡಿದುಕೊಳ್ಳಲು ಅಂತ್ಯಸಂಸ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕಪ್ಪನ ಮಗನನ್ನೇ ಮದುವೆಯಾದ ಪುತ್ರಿ, ಕುಟುಂಬದವರ ಕಠಿಣ ನಿರ್ಧಾರ: ಸಂಬಂಧ ಕಡಿದುಕೊಳ್ಳಲು ಅಂತ್ಯಸಂಸ್ಕಾರ

ಛಾತ್ರಾ: ಜಾರ್ಖಂಡ್ ಛಾತ್ರಾ ಜಿಲ್ಲೆಯಲ್ಲಿ ಸೋದರ ಸಂಬಂಧಿಯನ್ನು ಮದುವೆಯಾದ ಮಗಳ ಸಂಬಂಧ ಕಡಿದುಕೊಳ್ಳುವ ಸಲುವಾಗಿ ಮನೆಯವರು ಆಕೆಯ ಪ್ರತಿಕೃತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಮಗಳ ಪ್ರತಿಕೃತಿ ಮಾಡಿ ಶವಯಾತ್ರೆ ನಡೆಸಿ ಧಾರ್ಮಿಕ ಆಚರಣೆಗಳೊಂದಿಗೆ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. 25 ವರ್ಷದ ಸಬಿತಾ ಅಲಿಯಾಸ್ ಕಿರಣಕುಮಾರಿ ಹಾಗೂ ರಾಜ್ ದೀಪ್ ಕುಮಾರ್ ಮದುವೆ ನಾಲ್ಕು ತಿಂಗಳ ಹಿಂದೆ ನೆರವೇರಿದೆ.

ಸುಖದೇವ್ ರಾಮ್ ಅವರ ಪುತ್ರಿಯಾಗಿರುವ ಸಬಿತಾ ತನ್ನ ಚಿಕ್ಕಪ್ಪ ಲಖನ್ ರಾಮ್ ಅವರ ಮಗ ರಾಜ್ ದೀಪ್ ಕುಮಾರ್ ನನ್ನು ಮದುವೆಯಾಗಿದ್ದಾಳೆ. ಆಕೆಯ ಕುಟುಂಬ ಸದಸ್ಯರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಆಕೆಯ ಮನವೊಲಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರು. ಆದರೆ ಎಲ್ಲವೂ ವ್ಯರ್ಥವಾಗಿ ಸೋದರ ಸಂಬಂಧಿಯನ್ನೇ ಸಬಿತಾ ಮದುವೆಯಾಗಿದ್ದಾಳೆ.

ಕಸಿನ್ ಜೊತೆಗೆ ಜೀವನ ಕಳೆಯಲು ನಿರ್ಧರಿಸಿ ಮದುವೆಯಾಗಿದ್ದರಿಂದ ಆಕೆಯ ಮನಸ್ಸು ಬದಲಿಸಲು ವಿಫಲರಾದ ಮನೆಯವರು ಆಕೆ ಪ್ರತಿಕೃತಿಗೆ ಅಂತ್ಯಕ್ರಿಯೆ ಮಾಡುವ ಮೂಲಕ ಆಕೆಯೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ಛಾತ್ರಾ ಜಿಲ್ಲೆಯ ತಾಂಡವ ಪೊಲೀಸ್ ಠಾಣೆ ವ್ಯಾಪ್ತಿಯ ಖರಿಕಾ ಗ್ರಾಮದಲ್ಲಿ ಘಟನೆ ನಡೆದಿದೆ. ಮಗಳು ತಪ್ಪು ಹೆಜ್ಜೆ ಇಟ್ಟು ಸಮಾಜದಲ್ಲಿ ನಮಗೆ ಅವಮಾನವಾಗುವಂತೆ ಮಾಡಿದ್ದಾಳೆ. ಆಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸುತ್ತೇವೆ ಎಂದು ಕುಟುಂಬದವರು ಹೇಳಿದ್ದಾರೆ.

ಗ್ರಾಮಸ್ಥರ ಪ್ರಕಾರ ಸೋದರ ಸಂಬಂಧಿ ರಾಜ್ ದೀಪ್ ಜೊತೆಗೆ ಅನೇಕ ವರ್ಷಗಳಿಂದ ಸಬಿತಾ ಸಂಬಂಧ ಹೊಂದಿದ್ದಳು.. ಇಬ್ಬರು ರಾಂಚಿಯಲ್ಲಿ ವಾಸವಾಗಿದ್ದರು. ಜೊತೆಗೆ ಓದಿ ಕೆಲವು ತಿಂಗಳ ಹಿಂದೆ ಮದುವೆಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...