ಜನ ಇದೀಗ ಮನೆಯಲ್ಲೇ ಕೂತು ಫುಡ್ ಆರ್ಡರ್ ಮಾಡ್ತಾರೆ. ಆನ್ಲೈನ್ನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಇತ್ತೀಚಿನ ದಿನಗಳಲ್ಲಿ ರೂಢಿಯಾಗಿದೆ. ಗುಲಾಬ್ ಜಾಮೂನ್ನಿಂದ ಹಿಡಿದು ಊಟದವರೆಗೆ ಯಾವುದೇ ಖಾದ್ಯವನ್ನು ಮನೆಯಲ್ಲಿ ಕುಳಿತು ಸವಿಯಬಹುದು. ಫುಡ್ ಸಪ್ಲೈ ಅಪ್ಲಿಕೇಶನ್ಗಳು ಸಾಮಾನ್ಯವಾಗಿ ನಗರದೊಳಗೆ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಆಹಾರವನ್ನು ತಲುಪಿಸುತ್ತವೆ.
ಆದರೆ ಮಹಿಳೆಯೊಬ್ಬರು ದೀರ್ಘಾವಧಿಯ ಆಹಾರ ವಿತರಣೆಯನ್ನು ಮಾಡುವ ದಾಖಲೆಯನ್ನು ನಿರ್ಮಿಸಿದ್ದಾರೆ. ಮಹಿಳೆಯೊಬ್ಬರು ಸಿಂಗಾಪುರದಿಂದ ಅಂಟಾರ್ಕ್ಟಿಕಾದವರೆಗೆ ನಾಲ್ಕು ಖಂಡಗಳನ್ನು 30,000 ಕಿಲೋಮೀಟರ್ ದೂರ ಕ್ರಮಿಸುವ ಮೂಲಕ ಆಹಾರದ ಪ್ಯಾಕೇಜ್ ಅನ್ನು ತಲುಪಿಸುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಲಾದ ಕ್ಲಿಪ್ ನಲ್ಲಿ ಮಾನಸಾ ಗೋಪಾಲ್ ಎಂಬ ಮಹಿಳೆ ವಿಮಾನ ನಿಲ್ದಾಣದಲ್ಲಿ ವಿಶೇಷ ಆಹಾರ ವಿತರಣೆ ಮಾಡಲು ತನ್ನ ಧೈರ್ಯದ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಅವರು ಸಿಂಗಾಪುರದಿಂದ ವಿಮಾನವನ್ನು ಹತ್ತಿ ಜರ್ಮನಿಯ ಹ್ಯಾಂಬರ್ಗ್ ತಲುಪುತ್ತಾರೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್ ಬಳಿಕ ಅಂತಿಮವಾಗಿ ಅಂಟಾರ್ಕ್ಟಿಕಾಕ್ಕೆ ಹೋಗುತ್ತಾರೆ.
ಕ್ಲಿಪ್ನ ಕೊನೆಯಲ್ಲಿ ಮಾನಸ ಹಿಮ ದಾಟಿ ದೋಣಿಯಲ್ಲಿ ಪ್ರಯಾಣಿಸುತ್ತಾರೆ. ಅಂತಿಮವಾಗಿ ಡೆಲಿವರಿ ಪಾಯಿಂಟ್ ತಲುಪಿ ಫುಡ್ ಡೆಲಿವರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.
ಮಾನಸಾ ಗೋಪಾಲ್ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.