ಈಗ ಎಲ್ಲೆಲ್ಲೂ ಕೊರೊನಾ ವೈರಸ್ನದ್ದೇ ಅಬ್ಬರ. ಕ್ರಿಯೇಟಿವ್ ಬುದ್ಧಿಯ ಮಂದಿಯಂತೂ ದಿನನಿತ್ಯದ ಕೆಲಸಗಳಿಗೂ ಕೊರೋನಾ ಥೀಂಗಳನ್ನೇ ಕೊಡುವ ಮೂಲಕ ಭಾರೀ ವೈರಲ್ ಆಗುತ್ತಿದ್ದಾರೆ.
2020ರಲ್ಲಿ ಕೋಲ್ಕತ್ತಾದ ಸಿಹಿ ಅಂಗಡಿಯೊಂದು ಕೊರೋನಾ ಸೊಂದೇಶ್ ತಿನಿಸುವ ಮಾಡುವ ಮೂಲಕ ವೈರಲ್ ಆಗಿತ್ತು. ಇದೀಗ ಅಂಥದ್ದೇ ಟ್ರೆಂಡ್ ಅನ್ನು ಮಹಿಳೆಯೊಬ್ಬರು ಮುಂದುವರೆಸಿದ್ದಾರೆ.
COVID-19 ಅಂಟಿಸಿಕೊಳ್ಳಿ, ಬಹುಮಾನ ಗೆಲ್ಲಿ….! ಅಮೆರಿಕಾದಲ್ಲಿ ಹೀಗೊಂದು ವಿಚಿತ್ರ ಪಾರ್ಟಿ
ಟ್ವಿಟರ್ನಲ್ಲಿ ಮಿಂಪಿ ಹೆಸರಿನ ವ್ಯಕ್ತಿಯೊಬ್ಬರು ಶೇರ್ ಮಾಡಿರುವ ಈ ವಿಡಿಯೋದಲ್ಲಿ, ಈ ಮಹಿಳೆ ಕೊರೋನಾ ಆಕೃತಿಯ ವಡೆಗಳನ್ನು ತಯಾರಿಸುತ್ತಿರುವುದನ್ನು ನೋಡಬಹುದಾಗಿದೆ. ಆಲೂಗೆಡ್ಡೆ, ಅನ್ನ, ಈರುಳ್ಳಿ ಮತ್ತು ಟೊಮ್ಯಾಟೋ ಬಳಸಿಕೊಂಡು ಈ ಆಕೃತಿ ರಚಿಸಿದ್ದಾರೆ ಈ ಮಹಿಳೆ.
ಆಲೂಗೆಡ್ಡೆ ಭರಿತವಾದ ಉಂಡೆಗಳನ್ನು ಅನ್ನದ ಬಟ್ಟಲಿನಲ್ಲಿ ಇಟ್ಟು, ಅದಕ್ಕೆ ಹಬೆ ಕೊಟ್ಟು, ವಡೆ ಅದೆಷ್ಟು ಕ್ರಿಸ್ಪಿಯಾಗಿದೆ ಎಂದು ತೋರುತ್ತಾರೆ ಈ ಮಹಿಳೆ.