
ಪಾಣಿಪತ್: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಗುಂಡಿಟ್ಟು ಕೊಂದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಹರ್ಯಾಣದ ಪಾಣಿಪತ್ ನಲ್ಲಿ ಈ ಘಟನೆ ನಡೆದಿದೆ. 2021ರಲ್ಲಿ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಅಪಘಾತದಲ್ಲಿ ಸಾಯಿಸಲು ಸಂಚು ರೂಪಿಸಿದ್ದಾಳೆ. 2021ರ ಅಕ್ಟೋಬರ್ 5ರಂದು ವಿನೋದ್ ಬರಾಡ ಎಂಬಾತನಿಗೆ ಭೀಕರ ಅಪಘಾತವಾಗಿದ್ದು, ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು. ಎರಡು ತಿಂಗಳ ಬಳಿಕ ಡಿಸೆಂಬರ್ 15ರಂದು ವಿನೋದ್ ನನ್ನು ಮನೆಯಲ್ಲಿಯೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ವಿನೋದ್ ಚಿಕ್ಕಪ್ಪ ವಿರೇಂದ್ರ ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ವಿನೋದ್ ಪತ್ನಿ ನಿಧಿ ತನ್ನ ಪ್ರಿಯಕರ ಸುಮಿತ್ ಜೊತೆ ಸೇರಿ ಪತಿಯನ್ನೇ ಗುಂಡಿಟ್ಟು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ನಿಧಿ ಹಾಗೂ ಆಕೆ ಪ್ರಿಯಕರ ಮೊದಲು ವಿನೋದ್ ನನ್ನು ವಾಹನ ಅಪಘಾತದಲ್ಲಿ ಸಾಯಿಸಲು ಸಂಚು ಮಾಡಿ ಅಪಘಾತ ಮಾಡಿದ್ದರು. ಆದರೆ ವಿನೋದ್ ಅಪಘಾತದಲ್ಲಿ ಎರಡು ಕಾಲು ಕಳೆದುಕೊಂಡು ಬದುಕುಳಿದಿದ್ದರು. ಅಷ್ಟಾದರೂ ಪತಿ ಬದುಕಿರುವುದು ಸಹಿಸದೇ ಮನೆಯಲ್ಲಿಯೇ ಗುಂಡಿಟ್ಟು ಹತ್ಯೆ ಮಾಡಿದ್ದಾಳೆ.
ಜೂನ್ 7ರಂದು ಆರೋಪಿ ಸುಮಿತ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಪಘಾತದ ಸಂಚು ಹಾಗೂ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳಾದ ಸುಮಿತ್ ಹಾಗೂ ನಿಧಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.