ವಾಷಿಂಗ್ಟನ್: ಗೇಟ್ ಒಳಗೆ ಹೋಗಲು ಒದ್ದಾಡುತ್ತಿರುವ ಮಹಿಳೆಯೊಬ್ಬರು ತಮ್ಮ ತೂಕವನ್ನು 68 ಕೆ.ಜಿಯಷ್ಟು ಇಳಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ವಾಷಿಂಗ್ಟನ್ನ ಸಾರಾ ಲಾಕೆಟ್ ಈ ರೀತಿ ತೂಕ ಕಳೆದುಕೊಂಡು ಸುದ್ದಿಯಾಗಿದ್ದಾರೆ.
ಒಂದು ದಿನ ಮಗನ ಜತೆ ಹೋಗುತ್ತಿದ್ದ ಸಂದರ್ಭದಲ್ಲಿ ಗೇಟಿನ ಒಳಗೆ ನಾನು ಸಿಲುಕಿಕೊಂಡೆ. ಆ ಸಮಯದಲ್ಲಿ ಪತಿ ಬಂದು ಎಳೆಯಬೇಕಾಯಿತು. ಇದರಿಂದ ನಾನು ಎಷ್ಟು ಭಾರವಾಗಿದ್ದೇನೆ ಎನ್ನುವ ಅರಿವಾಗಿ ಅಂದೇ ತೆಳ್ಳಗಾಗುವ ಪಣತೊಟ್ಟೆ ಎಂದು ಲಾರಾ ಹೇಳಿಕೊಂಡಿದ್ದಾರೆ.
ಎರಡು ಮಕ್ಕಳ ತಾಯಿಯಾಗಿರುವ ಲಾರಾ ಗ್ಯಾಸ್ಟ್ರಿಕ್ ಸ್ಲೀವ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಈಗ 64 ಕೆ.ಜಿ. ತೂಕ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. “ನಾನು ಮೊದಲು ತುಂಬಾ ತಿನ್ನುತ್ತಿದ್ದೆ. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ಹಲವು ಆಹಾರಗಳನ್ನು ತ್ಯಜಿಸಬೇಕು, ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಇದರಿಂದ ನನಗೆ ತುಂಬಾ ಬೇಸರವಿದೆ” ಎಂದೂ ಲಾರಾ ಹೇಳಿದ್ದಾರೆ.
ಈಕೆಯ ವಿಡಿಯೋ ವೈರಲ್ ಆಗುತ್ತಲೇ ಈ ಶಸ್ತ್ರಚಿಕಿತ್ಸೆ ಜೀವಕ್ಕೆ ಮುಂದೊಂದು ದಿನ ಎಷ್ಟು ಅಪಾಯಕಾರಿ ಆಗಬಹುದು ಎಂಬ ಬಗ್ಗೆ ಹಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ. ಹೆಚ್ಚಾಗಿ ಸೆಲೆಬ್ರಿಟಿಗಳು ತೂಕ ಕಳೆದುಕೊಳ್ಳಲು ಹಲವು ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜೀವ ಕಳೆದುಕೊಂಡಿರುವ ಬಗ್ಗೆ ತಿಳಿಸಿದ್ದಾರೆ. ಹೆಲ್ತ್ ಡ್ರಿಂಕ್ಸ್ ಕುಡಿದು ಹಲವರು ತೂಕ ಕಳೆದುಕೊಳ್ಳುತ್ತಿದ್ದರೂ ಮುಂದೆ ಹೇಗೆಲ್ಲಾ ಅದು ಜೀವನಪೂರ್ತಿ ನಮ್ಮ ದೇಹದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ ಎಂಬ ಬಗ್ಗೆಯೂ ಹಲವರು ಎಚ್ಚರಿಕೆ ನೀಡಿದ್ದಾರೆ.