ರಾಯಚೂರು: 2021-22ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಕಿರುಸಾಲ ಯೋಜನೆಯಡಿ ಬಡ್ಡಿರಹಿತ ಸಾಲ ಮಂಜೂರು ಮಾಡಲು ಅರ್ಹ ಫಲಾನುಭಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 2021ರ ಆ.16 ಕೊನೆಯ ದಿನವಾಗಿದ್ದು, ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಅರ್ಹತೆಗಳು:
ಸಾಲ ಪಡೆಯಲು ನಿಗಮಕ್ಕೆ ಸಲ್ಲಿಸಬೇಕಾದ ಸಾಲದ ಅರ್ಜಿ, ಗ್ರೇಡಿಂಗ್ ಮಾಡಿರುವ ದಾಖಲೇಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಧೃಢೀಕರಿಸಿ ನೀಡುವುದು, ಸದಸ್ಯರೆಲ್ಲರೂ ಸಹಿ ಮಾಡಿರುವ 50 ರೂ. ಛಾಪಾಕಾಗದ ಪತ್ರ, ಬ್ಯಾಂಕ್ ಖಾತೆ ಪುಸ್ತಕದ ನಕಲು ಪ್ರತಿ. ಸಾಲ ಪಡೆಯಲು ಉದ್ದೇಶಿಸಿರುವ ಉತ್ಪಾದನಾ ಘಟಕದ ಯೋಜನಾ ವರದಿ. ಅದರಲ್ಲಿ ಘಟಕದ ಸ್ಥಿರ ಮತ್ತು ಚರಾಸ್ತಿಯ ಸಂಪೂರ್ಣ ವಿವರ ಮತ್ತು ಘಟಕದ ಉತ್ಪಾದನಾ ಸಾಮರ್ಥ್ಯದಿಂದ ಗುಂಪು ಮಾಸಿಕವಾಗಿ ಗಳಿಸುವ ನಿವ್ವಳ ಲಾಭದ ವಿವರ ಹೊಂದಿರತಕ್ಕದು, ಗುಂಪು ಕೈಗೊಳ್ಳುವ ಘಟಕದ ಸ್ಥಾಪನೆಯ ಬಗ್ಗೆ ಗುಂಪಿನ ಸಭೆಯಲ್ಲಿ ಎಲ್ಲಾ ಸದಸ್ಯರ ಸಹಿ ಮಾಡಿ ಕೈಗೊಳ್ಳುವ ನಿರ್ಣಯಿಸಿದ ಪ್ರತಿ, ಬೇರೆ ಯಾವುದೇ ಆರ್ಥಿಕ ಸಂಸ್ಥೆ ಅಥವಾ ಬ್ಯಾಂಕುಗಳಿAದ ಸಾಲ ಪಡೆದಿಲ್ಲ ಎಂಬ ಧೃಢೀಕರಣವನ್ನು ಗುಂಪು ಇರುವ ಭೌಗೋಳಿಕ ವ್ಯಾಪ್ತಿಯ ಕನಿಷ್ಠ 3 ಬ್ಯಾಂಕುಗಳು ಮತ್ತು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೀಡುವುದು, ಗುಂಪು ತಾಲ್ಲೂಕಿನ ಸ್ತ್ರೀಶಕ್ತಿ ಗುಂಪುಗಳ ಒಕ್ಕೂಟದಲ್ಲಿ ಪಡೆದ ಸದಸ್ಯತ್ವದ ಪ್ರತಿ, ಆಧಾರ್‌ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ:08532-231043 ಗೆ ಸಂಪರ್ಕಿಸುವಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.