alex Certify ದಿನಸಿ ಖರೀದಿಗೆಂದೇ 544 ಕಿ.ಮೀ. ಪ್ರಯಾಣಿಸುತ್ತಾಳೆ ಈ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಸಿ ಖರೀದಿಗೆಂದೇ 544 ಕಿ.ಮೀ. ಪ್ರಯಾಣಿಸುತ್ತಾಳೆ ಈ ಮಹಿಳೆ..!

ನೀವು ಸಾಮಾನ್ಯವಾಗಿ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ಖರೀದಿಸಲು ಹತ್ತಿರದ ಕಿರಾಣಿ ಅಂಗಡಿಗೋ ಅಥವಾ ಪಟ್ಟಣಕ್ಕೆ ಬಸ್ ನಲ್ಲೋ ಅಥವಾ ನಿಮ್ಮ ಸ್ವಂತ ವಾಹನದಲ್ಲೋ ಹೋಗಿಬರುತ್ತೀರಿ ಅಲ್ವಾ..? ಆದ್ರೆ ಇಲ್ಲೊಬ್ಬಳು ಮಹಿಳೆ ತನ್ನ ದಿನನಿತ್ಯದ ಅಗತ್ಯ ಸಾಮಾಗ್ರಿಗಳಿಗಾಗಿ ಎರಡು ದಿನದ ಪ್ರವಾಸವನ್ನೇ ಕೈಗೊಳ್ಳುತ್ತಾಳೆ.

ಹೌದು, ಅಚ್ಚರಿ ಅನ್ನಿಸಿದ್ರೂ ಇದು ಸತ್ಯ. ಕೆನಡಾದ ಯುಕಾನ್‌ನಲ್ಲಿ ಬಹಳ ವಿರಳ ಜನಸಂಖ್ಯೆಯಿರುವ ಪಟ್ಟಣದಲ್ಲಿ ಒಂಟಿಯಾಗಿ ವಾಸಿಸುವ ಮಹಿಳೆಯೊಬ್ಬಳು ತನ್ನ ದಿನನಿತ್ಯದ ಅಗತ್ಯ ಸಾಮಾಗ್ರಿಗಳಿಗಾಗಿ ಎರಡು ದಿನಗಳ ಪ್ರವಾಸವನ್ನೇ ಕೈಗೊಳ್ಳುತ್ತಾಳೆ.

ಟಿಕ್ ಟಾಕ್ ನಲ್ಲಿ ತನ್ನ ಪ್ರಯಾಣದ ಬಗ್ಗೆ ಹಂಚಿಕೊಂಡಿರುವ ಮಹಿಳೆ, ದಿನಸಿ ಸಾಮಾಗ್ರಿಗಾಗಿ ತಾನು ಕೈಗೊಂಡಿರುವ ರಸ್ತೆ ಪ್ರಯಾಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ  ವೈರಲ್ ಆಗಿದ್ದು, ನೆಟ್ಟಿಗರನ್ನು ವಿಸ್ಮಯಗೊಳಿಸಿದೆ.

ಯುಕಾನ್ ಪ್ರಾಂತ್ಯವು ಅತ್ಯಂತ ವಿರಳ ಜನಸಂಖ್ಯೆಯನ್ನು ಹೊಂದಿದೆ. ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಳ್ಳಬೇಕೆಂದ್ರೆ ಕಿರಾಣಿ ಅಂಗಡಿಯು 544 ಕಿ.ಮೀ. ದೂರದಲ್ಲಿದೆ. ಆದ್ದರಿಂದ, ಸಿನೆಡ್ ಮೇಡರ್ ಪ್ರತಿ ಆರರಿಂದ ಎಂಟು ವಾರಗಳಿಗೊಮ್ಮೆ ದೀರ್ಘ ಪ್ರಯಾಣ ಮಾಡುತ್ತಾಳೆ.

ಇನ್ನು ಈಕೆಯ ಪ್ರಯಾಣವನ್ನು ಇನ್ನಷ್ಟು ಸವಾಲಾಗಿಸುವುದೇನೆಂದರೆ ದೀರ್ಘ ಪ್ರಯಾಣದ ಉದ್ದಕ್ಕೂ ಯಾವುದೇ ಫೋನ್ ಸೇವೆ ಲಭ್ಯವಿಲ್ಲ. ವಿವಿಧ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಾ ಪ್ರಯಾಣ ಮಾಡಬೇಕಾಗುತ್ತದೆ. ಚಳಿಗಾಲದ ಅವಧಿಯಲ್ಲಂತೂ ಬಹಳ ಕಷ್ಟಕರವಾಗಿರುತ್ತದೆ ಎಂದು ಮಹಿಳೆ ಮೇಡರ್ ತಿಳಿಸಿದ್ದಾಳೆ.

ಅಲ್ಲದೆ ಮೇಡರ್ ತಾಜಾ ಹಣ್ಣು, ತರಕಾರಿಗಳನ್ನು ಖರೀದಿಸುವುದಿಲ್ಲವಂತೆ. ಯಾಕೆಂದರೆ ತರಕಾರಿಗಳು, ಹಣ್ಣುಗಳಂತಹ ತಾಜಾ ಆಹಾರವು ಅಂತಹ ಹವಾಮಾನ ಪರಿಸ್ಥಿತಿಗಳಲ್ಲಿ ದೀರ್ಘಕಾಲ ಉಳಿಯುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...