alex Certify 6 ತಿಂಗಳ ಕಾಲ ತಾಯಿ ಶವದ ಜೊತೆ ವಾಸವಾಗಿದ್ದ ಮಗಳು….! ಕಾರಣ ಕೇಳಿದ್ರೆ ಶಾಕ್ ಆಗ್ತಿರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ತಿಂಗಳ ಕಾಲ ತಾಯಿ ಶವದ ಜೊತೆ ವಾಸವಾಗಿದ್ದ ಮಗಳು….! ಕಾರಣ ಕೇಳಿದ್ರೆ ಶಾಕ್ ಆಗ್ತಿರಾ

ತಾಯಿ ದೇವರಿಗೆ ಸಮಾನ. ಮಕ್ಕಳಿಗಾಗಿ ತಾಯಿ ಸಾಕಷ್ಟು ತ್ಯಾಗ ಮಾಡ್ತಾಳೆ. ಪಾಲಕರ ಮೇಲೆ ಎಷ್ಟೇ ಪ್ರೀತಿಯಿದ್ದರೂ ಅವರು ಮರಣ ಹೊಂದಿದ ಮೇಲೆ ಅವರಿಗೆ ಅಂತಿಮ ಸಂಸ್ಕಾರ ಮಾಡುವುದು ಮಕ್ಕಳ ಕರ್ತವ್ಯ. ಆದ್ರೆ ಇಲ್ಲೊಬ್ಬ ಮಗಳು, ತಾಯಿ ಸತ್ತ ನಂತರವೂ ತಾಯಿ ಶವವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾಳೆ.

ಘಟನೆ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದಿದೆ. 54 ವರ್ಷದ ಕಿಂಬರ್ಲಿ ಹೆಲ್ಲರ್, ತಾಯಿ ಮೃತ ದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಳು. ಸುಮಾರು 6 ತಿಂಗಳುಗಳ ಕಾಲ ತಾಯಿ ಮೃತದೇಹವನ್ನು ಇಟ್ಟುಕೊಂಡಿದ್ದಳು. ತಾಯಿ ಮೇಲಿದ್ದ ಪ್ರೀತಿಗಾಗಿ ಅಲ್ಲ. ಆರ್ಥಿಕ ಲಾಭಕ್ಕಾಗಿ ಹೀಗೆ ಮಾಡಿದ್ದಳು.

Big News: ಒಂದೇ ಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಸೋಂಕು…!

ಆಕೆ ತಾಯಿ ಸತ್ತ ವಿಷ್ಯವನ್ನು ಯಾರಿಗೂ ಹೇಳಿರಲಿಲ್ಲ. ತಾಯಿಯ ಕೊಳೆತ ಶವದ ಜೊತೆ ಜೀವನ ನಡೆಸುತ್ತಿದ್ದಳು. ಅಕ್ಕಪಕ್ಕದವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸತ್ಯ ಹೊರಬಿದ್ದಿದೆ. ಪೊಲೀಸರು ಮಗಳನ್ನು ಬಂಧಿಸಿದ್ದಾರೆ. ತಾಯಿಗೆ ಸಾಮಾಜಿಕ ಭದ್ರತೆ ಹೆಸರಿನಲ್ಲಿ ಪ್ರತಿ ತಿಂಗಳು ಹಣ ಬರ್ತಿತ್ತಂತೆ. ಇದನ್ನು ಪಡೆಯಲು, ಮಗಳು ತಾಯಿ ಸತ್ತ ವಿಷ್ಯವನ್ನು ಮುಚ್ಚಿಟ್ಟಿದ್ದಾಳೆ. ಮಗಳ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತಾಯಿಯದ್ದು ಸ್ವಾಭಾವಿಕ ಸಾವು. ಕೊಲೆ ನಡೆದಿಲ್ಲವೆಂದು ವೈದ್ಯರು ದೃಢಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...