ಸೆಕ್ಸ್ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ಅನೇಕ ಅಧ್ಯಯನದಿಂದ ಬಹಿರಂಗವಾಗಿದೆ. 12 ವರ್ಷಗಳ ಕಾಲ ಸೆಕ್ಸ್ ನಿಂದ ದೂರವಿದ್ದ ಮಹಿಳೆಯೊಬ್ಬಳು ಇದನ್ನು ಒಪ್ಪಿಕೊಂಡು ಮತ್ತೆ ಸಂಬಂಧ ಬೆಳೆಸಲು ಮುಂದಾಗಿದ್ದಾಳೆ. ಆದ್ರೆ ಸಂಬಂಧ ಬೆಳೆಸಲು ಆಕೆಗೆ ಸಮಸ್ಯೆಯಾಗ್ತಿದೆಯಂತೆ.
ಸಿಡ್ನಿಯ 35 ವರ್ಷದ ಜೂಲಿಯೆಟ್ ಹೆರೆರಾ, ಭಾರತ ಭೇಟಿಯ ನಂತರ ಬದಲಾಗಿದ್ದಾಳೆ. 12 ವರ್ಷಗಳ ನಂತರ ಭಾರತದಿಂದ ವಾಪಸ್ ಸಿಡ್ನಿಗೆ ಹೋದ ಹೆರೆರಾ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಯಾಗಿದೆಯಂತೆ. ಹೆರೆರಾ, ಭಾರತಕ್ಕೆ ಬರುವ ಮೊದಲು ಸಾಕಷ್ಟು ಚಟಗಳನ್ನು ಹೊಂದಿದ್ದಳಂತೆ. ಡ್ರಗ್ಸ್, ಮದ್ಯ, ಆಲ್ಕೋಹಾಲ್ ಸೇರಿದಂತೆ ಅನೇಕ ಚಟ ಹೊಂದಿದ್ದ ಅವಳು, ಭಾರತಕ್ಕೆ ಬಂದ್ಮೇಲೆ ಸಂಪೂರ್ಣ ಬದಲಾಗಿದ್ದಳಂತೆ. ಇಲ್ಲಿನ ಆಧ್ಯಾತ್ಮಿಕಕ್ಕೆ ಮನಸೋತಿದ್ದ ಹೆರೆರಾ, ಎಲ್ಲವನ್ನು ತ್ಯಜಿಸಿ, ಬದಲಾಗಿದ್ದಳಂತೆ.
ಸಿಡ್ನಿಗೆ ಮರಳಿದ ಮೇಲೆ ಹೆರೆರಾಗೆ ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದಾನಂತೆ. ಸೆಕ್ಸ್ ನಿಂದ ದೂರವಿರುವುದು ಕಷ್ಟ ಎಂದಿರುವ ಹೆರೆರಾಗೆ ಈಗ ಸಂಬಂಧ ಬೆಳೆಸುವುದು ಕಷ್ಟವಾಗಿದೆಯಂತೆ. 12 ವರ್ಷದಲ್ಲಿ ಸೆಕ್ಸ್ ವಿಷ್ಯದಲ್ಲಿ ಎಲ್ಲವನ್ನೂ ಮರೆತಿದ್ದೇನೆ ಎಂದು ಹೆರೆರಾ ಹೇಳಿದ್ದಾಳೆ.