ಕೆಲವರು ಎಷ್ಟೇ ವಯಸ್ಸಾದ್ರೂ ತಮಾಷೆ ಮಾಡುವುದನ್ನು ಬಿಡುವುದಿಲ್ಲ. ಕೆಲ ತಮಾಷೆಗಳು ಖುಷಿ ನೀಡಿದ್ರೆ ಮತ್ತೆ ಕೆಲ ತಮಾಷೆ ಭಯ ಹುಟ್ಟಿಸುತ್ತವೆ. ಮತ್ತೆ ಕೆಲವು ಮುಜುಗರಕ್ಕೆ ಕಾರಣವಾಗುತ್ತವೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಇಂಥಹ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಚರ್ಚೆಯಾಗ್ತಿದೆ.
ಇಲ್ಲಿನ ಸ್ಯೂ ಗಾಫ್ ಹೆಸರಿನ ಮಹಿಳೆ, ತನ್ನ ಮನೆಯ ಹೊಸ ಮಾಲೀಕರನ್ನು ಹೆದರಿಸಲು ಮುಂದಾಗಿದ್ದಾಳೆ. ಮನೆಯಲ್ಲಿ ಅಸ್ಥಿಪಂಜರವನ್ನು ಇಟ್ಟಿದ್ದಾಳೆ. ಮನೆ ಮಾರಾಟ ಮಾಡಿದ ನಂತ್ರ ಕುಟುಂಬ ಸಮೇತವಾಗಿ ಗಾಫ್ ಬೇರೆ ಮನೆಗೆ ಹೊರಟಿದ್ದಳು. ಆದ್ರೆ ಹೊರಡುವ ಮುನ್ನ, ಮನೆ ಮೂಲೆಯಲ್ಲಿ ಅಸ್ಥಿಪಂಜರ ಇಟ್ಟಿದ್ದಾಳೆ. ಅದ್ರ ಜೊತೆ ‘ಹೈಡ್ & ಸೀಕ್ ಚಾಂಪ್’ ಎಂಬ ಪತ್ರವಿಟ್ಟಿದ್ದಾಳೆ.
ಗಾಫ್ ಗೆ ಈಗ 57 ವರ್ಷ. ಆದರೆ ಮಕ್ಕಳಂತೆ ಸದಾ ತಮಾಷೆ ಮಾಡ್ತಿರುತ್ತಾಳಂತೆ. ಒಮ್ಮೆ ಮಗಳನ್ನು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದ್ದಳಂತೆ. ಮಂಚದ ಕೆಳಗೆ ಕುಳಿತು ಆಕೆ ಕಾಲು ಮುಟ್ಟಿದ್ದಳಂತೆ. ಇದ್ರಿಂದ ಮಗಳು ಭಯಗೊಂಡಿದ್ದಳಂತೆ. ಪತ್ನಿ ತಮಾಷೆ ಗಾಫ್ ಪತಿಗೆ ಇಷ್ಟವಾಗುವುದಿಲ್ಲ. ಮನೆಯಲ್ಲಿ ಅಸ್ಥಿಪಂಜರ ಇಡುವ ವೇಳೆಯೂ ಆತ ನಕ್ಕಿದ್ದು ಬಿಟ್ಟರೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲವಂತೆ.