
ಲಂಡನ್ ಏರ್ಪೋರ್ಟ್ನಲ್ಲಿ ಯುವತಿಯೊಬ್ಬಳು 4.8 ಲಕ್ಷ ರೂಪಾಯಿ ನಗದು, ಲಗೇಜ್ನೊಂದಿಗೆ ಫಿಯಾನ್ಸಿಯನ್ನು ಬಿಟ್ಟು ಪರಾರಿಯಾದ ಪ್ರಸಂಗ ನಡೆದಿದೆ.
ಈ ಜೋಡಿ ಒಂದು ದಿನದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಾಶ್ ರೂಂಗೆ ಹೋಗಿಬರುವುದಾಗಿ ಹೇಳಿ ಹೋದ ಆಕೆ ಲಗೇಜ್ಗಳೊಂದಿಗೆ ಪರಾರಿಯಾಗಿದ್ದಳು.
ಆಕೆ ನಾಪತ್ತೆಯಾಗಿದ್ದರ ಅನುಮಾನದಲ್ಲಿ ವರನು ಟರ್ಮಿನಲ್ ಸಿಬ್ಬಂದಿಗೆ ತಿಳಿಸಿದ ನಂತರ, ವಿಮಾನ ನಿಲ್ದಾಣದ ಎಲ್ಲೆಡೆ ಹುಡುಕಾಡಿದರು. ಆದರೆ ಆಕೆ ಎಲ್ಲಿಯೂ ಪತ್ತೆಯಾಗಲಿಲ್ಲ. ಆಕೆಯನ್ನು ಇತ್ತೀಚೆಗಷ್ಟೇ ಭೇಟಿಯಾಗಿದ್ದು, ಹೆಚ್ಚಿನ ಮಾಹಿತಿಯೂ ಆತನಲ್ಲಿ ಇರಲಿಲ್ಲ.