ನವದೆಹಲಿ: ಉತ್ತರ ಪ್ರದೇಶದ ಲಕ್ನೋದಲ್ಲಿ ತನ್ನ ನಾಯಿ ಕೊಂದು ಶವವನ್ನು ಕೆರೆಯಲ್ಲಿ ವಿಲೇವಾರಿ ಮಾಡಲು ಹೋಗಿದ್ದ ವೇಳೆ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮುದ್ದಿನ ನಾಯಿ ತನಗೆ ಮತ್ತು ಕಿರಿಯ ಮಗುವನ್ನು ಕಚ್ಚಿದ್ದರಿಂದ ಕೋಪಗೊಂಡು ಮಹಿಳೆ ಅದನ್ನು ಕೊಂದಿದ್ದಾಳೆ. ಬಳಿಕೆ ಕೆರೆಯಲ್ಲಿ ನಾಯಿ ಶವ ಎಸೆಯಲು ಹೋದಾಗ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗಂಟೆಗಟ್ಟಲೆ ಪತ್ನಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಆತಂಕಗೊಂಡಿದ್ದರು. ನಂತರ ಹೆಂಡತಿಯನ್ನು ಹುಡುಕಾಡಿದಾಗ ಕೆರೆಯ ಬಳಿ ಅವಳ ಚಪ್ಪಲಿ ಕಂಡು ಬಂದಿವೆ. ಸ್ಥಳೀಯರ ನೆರವಿನೊಂದಿಗೆ ಪತ್ನಿಯ ಶವವನ್ನು ನೀರಿನಿಂದ ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.