
ಮಹಿಳೆಯೊಬ್ಬಳು ತನ್ನ ಮಗನನ್ನೇ ಕಿಡ್ನ್ಯಾಪ್ ಮಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮನೆ ಕಟ್ಟಬೇಕು ಎಂಬ ಕಾರಣಕ್ಕೆ ಮಹಿಳೆ ಈ ಖತರ್ನಾಕ್ ಐಡಿಯಾ ಮಾಡಿ ಸಿಕ್ಕಿಬಿದ್ದಿದ್ದಾಳೆ.
ಸ್ವಂತ ಮನೆ ಕಟ್ಟಬೇಕು ಎಂದು ಮಹಿಳೆ ತನ್ನ ಪ್ರಿಯಕರನೊಂದಿಗೆಸೇರಿ ಮಗನನ್ನು ಅಪಹಿಸಿದ್ದಾಳೆ. ಬಳಿಕ ಮನೆಗೆ ಕರೆ ಮಾಡಿ 25 ಲಕ್ಷ ಬೇಡಿಕೆ ಇಟ್ಟಿದ್ದಾಳೆ. ಛಾಪ್ರಾದಲ್ಲಿ ಸ್ವಂತ ಮನೆ ಕಟ್ಟಬೇಕೆಂದು ಮಹಿಳೆ ಈ ರೀತಿ ಮಾಡಿದ್ದಾಳಂತೆ.
ಹಣಕ್ಕೆ ಬೇದಿಕೆ ಇಟ್ಟ ಮಹಿಳೆ ಒಂದು ವೇಳೆ ಹಣ ಕೊಟ್ಟಿಲ್ಲವೆಂದರೆ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ. 13 ವರ್ಷದ ಆದಿತ್ಯ ಕುಮಾರ್ ತಾಯಿಯಿಂದಲೇ ಅಪಹರಣಕ್ಕೊಳಗಾದ ಬಾಲಕ.
ಬಾಲಕ ಕಿಡ್ನ್ಯಾಪ್ ಆಗಿರುವ ಬಗ್ಗೆ ಆತನ ಚಿಕ್ಕಪ್ಪ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕನ ತಾಯಿ ಬಬಿತಾ ದೇವಿಯೇ ಈ ಕೃತ್ಯವೆಸಗಿದ್ದಾಳೆ. ಸದ್ಯ ಪಾಟ್ನಾದಲ್ಲಿ ಆದಿತ್ಯ ಕುಮಾರ್ ನನ್ನು ಪತ್ತೆ ಮಾಡಿರುವ ಪೊಲೀಸರು ಬಬಿತಾಳನ್ನು ವಿಚಾರಣೆ ನಡೆಸಿದಾಗ ತಾನು ಛಾಪ್ರಾದಲ್ಲಿ ಸ್ವಂತ ಮನೆ ಕಟ್ಟಬೇಕು ಎಂಬ ಕಾರಣಕ್ಕೆ ಮಗನನ್ನು ಕಿಡ್ನ್ಯಾಪ್ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಬಿತಾದೇವಿ, ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.