ವಾಷಿಂಗ್ಟನ್: ತನ್ನ ನವಜಾತ ಶಿಶುವಿಗೆ ಎದೆಹಾಲುಣಿಸುತ್ತಿದ್ದ ಕಾರಣಕ್ಕೆ ಮಹಿಳೆಯೊಬ್ಬಳನ್ನು ರೆಸ್ಟೋರೆಂಟ್ ನಿಂದ ಹೊರಹಾಕಿದ್ದಲ್ಲದೆ, ಮತ್ತೆ ಹಿಂತಿರುಗಬೇಡ ಎಂದು ಹೇಳಿ ಅವಮಾನಿಸಿರುವ ಘಟನೆ ನಡೆದಿದೆ. ಅಮೆರಿಕಾದ ವಾಷಿಂಗ್ಟನ್‌ನ ಅನಾಕೋರ್ಟಸ್‌ನಲ್ಲಿರುವ ಗ್ರೀಕ್ ಐಲ್ಯಾಂಡ್ಸ್ ರೆಸ್ಟೋರೆಂಟ್‌ನಲ್ಲಿ ಈ ಅವಮಾನಕಾರಿ ಘಟನೆ ನಡೆದಿದೆ.
ರೂಬಿ ಮೀಡೆನ್ ಮತ್ತು ಆಕೆಯ ಪತಿ ಆರನ್ ತಮ್ಮ ನವಜಾತ ಶಿಶುವಿನ ಜೊತೆ ತಮ್ಮ ಕುಟುಂಬದೊಂದಿಗೆ ರೆಸ್ಟೋರೆಂಟ್ ನಲ್ಲಿ ಭೋಜನ ಸವಿಯಲು ಯೋಜಿಸಿದ್ದರು. ಕುಟುಂಬ ಸದಸ್ಯರು ಬರುವವರೆಗೂ ಕಾಯುತ್ತಿದ್ದಾಗ, ಅವರ ಮೂರು ದಿನದ ಮಗು ಹಸಿವಿನಿಂದ ಬಳಲಿದೆ. ಹೀಗಾಗಿ ರೂಬಿ ರೆಸ್ಟೋರೆಂಟ್ ಒಳಗೆ ಮಗುವಿಗೆ ಹಾಲುಣಿಸಿದ್ದಾರೆ. ಗೋಡೆಗೆ ಮುಖ ಮಾಡಿ ಕುಳಿತು ಆಕೆ ಹಾಲುಣಿಸಿದ್ದಾರೆ.
ಶುಭ ಸುದ್ದಿ: 1792 ಗ್ರಾಮ ಲೆಕ್ಕಿಗರು ಸೇರಿ ಕಂದಾಯ ಇಲಾಖೆಯಲ್ಲಿ 5689 ಹುದ್ದೆಗಳ ನೇಮಕಾತಿ
ಆದರೆ, ರೂಬಿ ಅವರಿದ್ದ ಮೇಜಿನ ಬಳಿ ಬಂದ ರೆಸ್ಟೋರೆಂಟ್ ಮಾಲೀಕರು ವಿವರಣೆಯನ್ನು ನೀಡದೆ ಕುಟುಂಬವನ್ನು ಹೊರಹೋಗುವಂತೆ ಹೇಳಿದ್ದಾರೆ ಮತ್ತು ಎಂದಿಗೂ ಹಿಂತಿರುಗಬೇಡಿ ಎಂದು ಅವಮಾನ ಮಾಡಿ ಕಳುಹಿಸಿದ್ದಾರೆ.
ಈ ಬಗ್ಗೆ ಆನ್ಲೈನ್ ನಲ್ಲಿ ದೂರಿದ ರೂಬಿ ಪತಿ, “ರೆಸ್ಟೋರೆಂಟ್ ಮಾಲೀಕರು ತಮ್ಮ ಪತ್ನಿಯನ್ನು ‘ಪ್ರಾಣಿ’ ಮತ್ತು ಶಿಶುವನ್ನು ‘ಬ್ರಾಟ್’ ಎಂದು ಕರೆದಿದ್ದಾರೆ. ನಿಮ್ಮ ಮಗುವಿಗೆ ಸ್ತನ್ಯಪಾನ ಮಾಡಲು ನನ್ನ ರೆಸ್ಟೋರೆಂಟ್‌ಗೆ ಬರಬೇಡಿ” ಎಂದು ಹೇಳಿರುವುದಾಗಿ ಬರೆದಿದ್ದಾರೆ.
ರೆಸ್ಟೋರೆಂಟ್ ಮಾಲೀಕರ ಧೋರಣೆ ವಿರುದ್ಧ ಅನೇಕರು ಪ್ರತಿಭಟನೆ ನಡೆಸಿದರು. ಸ್ತನ್ಯಪಾನ ಉಣಿಸುತ್ತಿದ್ದ ಮಹಿಳೆಯನ್ನು ಹೊರಹಾಕುವುದು ಕಾನೂನುಬಾಹಿರ ಎಂದು ಪ್ರತಿಭಟನಾಕಾರರು ದೂರಿದ್ದಾರೆ.