alex Certify ಸಿಂಹದ ಬಳಿ ತೆರಳಿ ಐ ಲವ್​ ಯೂ ಎಂದ ಮಹಿಳೆ..! ವಿಚಿತ್ರ ವರ್ತನೆ ಕಂಡು ದಂಗಾದ ಮೃಗಾಲಯ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹದ ಬಳಿ ತೆರಳಿ ಐ ಲವ್​ ಯೂ ಎಂದ ಮಹಿಳೆ..! ವಿಚಿತ್ರ ವರ್ತನೆ ಕಂಡು ದಂಗಾದ ಮೃಗಾಲಯ ಸಿಬ್ಬಂದಿ

ಹುಲಿ, ಸಿಂಹಗಳ ಹೆಸರು ಕೇಳಿದ್ರೆ ಸಾಕು ಭಯವಾಗುತ್ತೆ. ಅಂತದ್ರಲ್ಲಿ ನ್ಯೂಯಾರ್ಕ್​ನ ಬ್ರಾಂಕ್ಸ್​ ಮೃಗಾಲಯದಲ್ಲಿ ಮಹಿಳೆಯೊಬ್ಬಳು ತಡೆಗೋಡೆಯನ್ನು ಹತ್ತಿ ಸಿಂಹದ ಹತ್ತಿರ ತೆರಳಿದ್ದಾಳೆ. ಮಾತ್ರವಲ್ಲದೇ ಗುಲಾಬಿಯನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡುತ್ತಾ ಸಿಂಹದ ಮೇಲೆ ಹಣವನ್ನು ಎಸೆದಿದ್ದಾಳೆ.

ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿದ ಮಹಿಳೆ ಸಿಂಹದ ಬಳಿ ತೆರಳಿ ಈ ರೀತಿ ಹೂವು ಹಾಗೂ ಹಣವನ್ನು ಹಿಡಿದು ಸಿಂಹದ ಬಳಿ ಮಾಡಿದ ವಿಚಿತ್ರ ವರ್ತನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಆಕೆ, ನಾನು ಈತನನ್ನು ತುಂಬಾ ಮಿಸ್​ ಮಾಡಿಕೊಂಡಿದ್ದೇನೆ ಎಂದು ಹೇಳುತ್ತಿರೋದನ್ನು ಕೇಳಬಹುದಾಗಿದೆ.

ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ಈ ಮಹಿಳೆ ಸಿಂಹವನ್ನು ತನ್ನ ಹಳೆಯ ಸ್ನೇಹಿತ ಎಂಬಂತೆ ಮಾತನಾಡಿಸುತ್ತಿದ್ದಳಂತೆ. ಕಿಂಗ್​, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಿನಗಾಗಿ ಮರಳಿ ಬಂದಿದ್ದೇನೆ ಎಂದೆಲ್ಲ ಸಿಂಹದ ಬಳಿ ಕೂಗಿದ್ದಾಳೆ ಎನ್ನಲಾಗಿದೆ.

ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮೃಗಾಲಯದ ವಕ್ತಾರ, ವೀಕ್ಷಕರು ಮೃಗಾಲಯದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆಕೆ ಅಲ್ಲಿಂದ ಕಾಲ್ಕಿತ್ತಿದ್ದಳು ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...