alex Certify ಶಾಕಿಂಗ್: ಏಕಕಾಲಕ್ಕೆ ಆಲ್ಫಾ, ಬೀಟಾ ವೈರಸ್ ತಗುಲಿ ವೃದ್ಧೆ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಏಕಕಾಲಕ್ಕೆ ಆಲ್ಫಾ, ಬೀಟಾ ವೈರಸ್ ತಗುಲಿ ವೃದ್ಧೆ ಸಾವು

ಕೋವಿಡ್-19 ರೂಪಾಂತರಿ ಆಲ್ಫಾ ಮತ್ತು ಬೀಟಾ ಈ ಎರಡೂ ಸೋಂಕು ತಗುಲಿ 90 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.

ವೃದ್ಧೆಯು ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೊರೊನಾ ಪರೀಕ್ಷೆಯಲ್ಲಿ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆರಂಭದಲ್ಲಿ ಅವರ ಆಮ್ಲಜನಕದ ಮಟ್ಟವು ಉತ್ತಮವಾಗಿತ್ತು. ಆದರೆ, ನಿಧಾನಕ್ಕೆ ಆಕೆಯ ಸ್ಥಿತಿ ಹದಗೆಟ್ಟ ಪರಿಣಾಮ ಕೆಲವು ದಿನಗಳ ಬಳಿಕ ವೃದ್ಧೆ ಮೃತಪಟ್ಟಿದ್ದಾರೆ.

ಆಸ್ಪತ್ರೆಯ ಮಾಹಿತಿ ಪ್ರಕಾರ, ಆ ಸಮಯದಲ್ಲಿ ಆಲ್ಫಾ ಮತ್ತು ಬೀಟಾ ರೂಪಾಂತರಗಳು ಬೆಲ್ಜಿಯಂನಲ್ಲಿ ಅತಿ ವೇಗವಾಗಿ ಪ್ರಸಾರವಾಗುತ್ತಿದ್ದವು. ವೃದ್ಧೆಗೆ ಎರಡು ವಿಭಿನ್ನ ವೈರಸ್ ಹೊಂದಿದ ಜನರಿಂದ ಸೋಂಕು ತಗುಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ದುರದೃಷ್ಟವಶಾತ್ ವೃದ್ಧೆಗೆ ಹೇಗೆ ಸೋಂಕು ತಗುಲಿತು ಎಂಬುದು ತಿಳಿದಿಲ್ಲ ಎಂದು ಹೇಳಿದೆ.

ಈ ಕಾರಣಕ್ಕೆ ಡೆಲಿವರಿ ಬಾಯ್ ಆದ್ರು ಪೊಲೀಸ್ ಅಧಿಕಾರಿ…!

2019ರ ಕೊನೆಯ ತಿಂಗಳಿನಲ್ಲಿ ಭುಗಿಲೆದ್ದ ಮಾರಣಾಂತಿಕ ಕೊರೋನ ವೈರಸ್, 2020ರ ಆರಂಭದಲ್ಲಿ ಜಗತ್ತನ್ನು ಸ್ವಾಧೀನಪಡಿಸಿಕೊಂಡಿತು. ವಿಶ್ವದ ಬಹುತೇಕ ದೇಶಗಳು ಸಂಪೂರ್ಣ ಲಾಕ್ ಡೌನ್ ಘೋಷಿಸಿತು. ಇದರಿಂದ ಭಾರತವೂ ಹೊರತಾಗಿಲ್ಲ.

2021 ಆರಂಭವಾಗುತ್ತಲೇ ಕೊರೋನಾತಂಕ ನಿವಾರಣೆಯಾಗುತ್ತದೆ ಎಂದು ಜನರಿಗೆ ಹೊಸ ಭರವಸೆ ಮೂಡಿತು. ಪ್ರಪಂಚದಾದ್ಯಂತ ಲಸಿಕೆಗಳನ್ನು ಕೊಡಲು ಶುರು ಮಾಡಿದ್ದರಿಂದ ಜನರಲ್ಲಿ ಹೊಸ ಆಶಾಕಿರಣ ಮೂಡಿತ್ತು. ಆದರೆ ದುರಾದೃಷ್ಟವೆಂಬಂತೆ ಕೋವಿಡ್-19 ನ ಹೊಸ ರೂಪಾಂತರಗಳು ವಿವಿಧ ನಗರಗಳಲ್ಲಿ ಕಂಡು ಬರುತ್ತಿದ್ದು, ಮತ್ತೆ ಆತಂಕದ ಛಾಯೆ ಆವರಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...