ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದ ಮಹಿಳೆಗೆ ಸೆಪ್ಟೆಂಬರ್ 8ರಂದು ಕೋವಿಡ್ ಲಸಿಕೆ ಹಾಕಿಸಿದ ವಿಚಿತ್ರ ಘಟನೆಯು ಮೀರತ್ ಜಿಲ್ಲೆಯ ಸರ್ಧನ ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯ ಸಹೋದರ ವಾಸಿಂ ಮೊಬೈಲ್ನಲ್ಲಿ ಲಸಿಕೆ ಯಶಸ್ವಿಯಾಗಿದೆ ಎಂಬ ಸಂದೇಶ ಸ್ವೀಕರಿಸಿದ ಬಳಿಕ ಆರೋಗ್ಯ ಕೇಂದ್ರದ ಯಡವಟ್ಟು ಬೆಳಕಿಗೆ ಬಂದಿದೆ.
ಪುರಸಭೆಯು ಮೃತ ಫರಾಳ ಮರಣ ಪ್ರಮಾಣ ಪತ್ರ ನೀಡಿದರೂ ಸಹ ಲಸಿಕಾ ಕೇಂದ್ರದಲ್ಲಿ ಫರಾಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಸೆಪ್ಟೆಂಬರ್ 8ರಂದು ಕೊರೊನಾ ಲಸಿಕೆ ನೀಡಿದ ಬಗ್ಗೆ ದಾಖಲೆ ನೀಡಿದೆ.
ಈ ಬಗ್ಗೆ ಮೃತ ಫರಾಳ ಸಹೋದರ ಆರೋಗ್ಯ ಕೇಂದ್ರದಲ್ಲಿ ವಿಚಾರಣೆ ಮಾಡಿದ ವೇಳೆಯಲ್ಲಿ ಅಲ್ಲಿನ ಸಿಬ್ಬಂದಿ ಹಾರಿಕೆಯ ಉತ್ತರವನ್ನು ನೀಡಿದ್ದಾರೆ.
ಈ ಘಟನೆಯು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದರೂ ಸಹ ತಾವು ಮಾಡಿರುವ ಯಡವಟ್ಟುಗಳ ಬಗ್ಗೆ ಇಲ್ಲಿಯವರೆಗೆ ಆರೋಗ್ಯ ಕೇಂದ್ರವು ಯಾವುದೇ ಸ್ಪಷ್ಟೀಕರಣ ನೀಡಿಲ್ಲ.