ಟೊಕಿಯೋ: ತನ್ನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯಿಂದ ಪತಿರಾಯ ಪರಿಹಾರ ಪಡೆದುಕೊಂಡಿದ್ದಾನೆ. ಟೊಕಿಯೋ ಕೋರ್ಟ್ ದೂರುದಾರನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಗೆ 70 ಸಾವಿರ ರೂಪಾಯಿ ದಂಡ ವಿಧಿಸಿದ್ದು ಅದನ್ನು ಪರಿಹಾರವಾಗಿ ದೂರುದಾರನಿಗೆ ನೀಡುವಂತೆ ಸೂಚಿಸಿದೆ.
ಫೆಬ್ರವರಿ 16 ರಂದು ಟೋಕಿಯೋ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಈ ಕುರಿತು ಸೂಚಿಸಲಾಗಿದೆ. ಆನ್ಲೈನ್ನಲ್ಲಿ ಪರಿಚಿತವಾಗಿದ್ದ ದೂರುದಾರನ ಪತ್ನಿಯೊಂದಿಗೆ ಮಹಿಳೆ ಗೆಳೆತನ ಬೆಳೆಸಿ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.
ಈ ವಿಚಾರ ಗೊತ್ತಾದ ಪತಿ ಕೋರ್ಟ್ ಗೆ ದೂರು ನೀಡಿದ್ದ. ವಿಚಾರಣೆ ನಡೆಸಿದ ಕೋರ್ಟ್ ದೂರುದಾರನಿಗೆ 70 ಸಾವಿರ ರೂಪಾಯಿ ನೀಡಲು ಮಹಿಳೆಗೆ ಸೂಚಿಸಿದೆ. ಆದರೆ, ಇದನ್ನು ಒಪ್ಪದ ಮಹಿಳೆ, ನಾನು ದೂರುದಾರನ ಪತ್ನಿಯೊಂದಿಗೆ ಸೆಕ್ಸ್ ನಡೆಸಿದ್ದನ್ನು ಅಕ್ರಮ ಸಂಬಂಧ ಎಂದು ಕರೆಯಲಾಗುವುದಿಲ್ಲ. ನಾನು ಅವರ ಮದುವೆ ಸಂಬಂಧ ಹಾಳು ಮಾಡಿಲ್ಲ. ಇದು ದಾಂಪತ್ಯ ದ್ರೋಹವಲ್ಲ ಎಂದು ವಾದಿಸಿದ್ದಾಳೆ.
ಆಕೆಯ ವಾದವನ್ನು ಒಪ್ಪದ ಕೋರ್ಟ್ ದೂರುದಾರರನ ಪತ್ನಿಯೊಂದಿಗೆ ಲೈಂಗಿಕ ನಡವಳಿಕೆಯಲ್ಲಿ ತೊಡಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಗೆ ದಂಡ ವಿಧಿಸಿದೆ.