ಅನಾರೋಗ್ಯದಿಂದ ನರಳುತ್ತಿರುವ, ಸಾವಿನ ಅಂಚಿನಲ್ಲಿರುವ ತನ್ನವರನ್ನು ಕಾಪಾಡಿಕೊಳ್ಳಲು ಅವರ ಪ್ರೀತಿ ಪಾತ್ರರು ಏನ್ ಬೇಕಾದ್ರೂ ಮಾಡ್ತಾರೆ. ಅಂತಹ ಹಲವು ಲವ್ ಸ್ಟೋರಿಗಳನ್ನ ನೀವು ನೋಡಿರ್ತೀರ. ಅಂಥದ್ದೇ ಒಂದು ಪ್ರೇಮಕಥೆ ಚೀನಾದಿಂದ ಬೆಳಕಿಗೆ ಬಂದಿದೆ.
ಅಲ್ಲಿ ಯುವತಿಯೊಬ್ಬಳು ತನ್ನ ಕುಟುಂಬ ಮತ್ತು ತನ್ನ ಗಂಡನನ್ನು ನೋಡಿಕೊಳ್ಳಲು ಹಣವನ್ನು ಸಂಗ್ರಹಿಸಲು ಮನೆಯಲ್ಲಿ ತಯಾರಿಸಿದ ಡಂಪ್ಲಿಂಗ್ ( ಮಮ್ಮೂಸ್ ) ಗಳನ್ನು ಮಾರಾಟ ಮಾಡುತ್ತಾಳೆ. ಆಕೆಯ ಪತಿ ಭೀಕರ ಕಾರು ಅಪಘಾತ ಸಂಭವಿಸಿ ಕಳೆದ ಮೂರು ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ ಇಬ್ಬರು ಮಕ್ಕಳ ತಾಯಿಯನ್ನು ಇಂಟರ್ನೆಟ್‌ನಲ್ಲಿ ಅಸಂಖ್ಯಾತ ಜನರು ಹೊಗಳಿದ್ದಾರೆ. ನಿ ಎಂಬ ಉಪನಾಯ ಹೊಂದಿರುವ ಮಹಿಳೆ ಜಿಯಾಂಗ್ಸಿಯ ನೈಋತ್ಯ ಪ್ರಾಂತ್ಯದ ಆನಿ ಕೌಂಟಿಯಿಂದ ಬಂದವರು. ಟಿಕ್‌ಟಾಕ್‌ನ ಚೈನೀಸ್ ಆವೃತ್ತಿ ಡೌಯಿನ್‌ನಲ್ಲಿ ನೀ ಪೋಸ್ಟ್ ಮಾಡಿದ ವೀಡಿಯೊ ಪ್ರಕಾರ ಅವರ ಪತಿ ತಲೆಬುರುಡೆ ಮುರಿತಕ್ಕೆ ಒಳಗಾಗಿದ್ದು ಸೆಪ್ಟೆಂಬರ್ ಆರಂಭದಿಂದ ಪ್ರಜ್ಞಾಹೀನರಾಗಿದ್ದಾರೆ.
ಈ ಪೋಸ್ಟ್ 2.7 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ. ಜನರು ತಮ್ಮ ಕುಟುಂಬದ ನಿರ್ವಹಣೆ ಮತ್ತು ಡಿಂಗ್ ನನ್ನುಬದುಕುಳಿಸಲು ಸಹಾಯ ಮಾಡಲು ನೀ ಮಾಡಬಹುದಾದ ಎಲ್ಲವನ್ನೂ ಮಾಡಿದ್ದಕ್ಕಾಗಿ ನೀಯನ್ನು ನೆಟ್ಟಿಗರು ಹೊಗಳಿದ್ದಾರೆ.
ಡಿಂಗ್ ಗೆ ಮೂರು ಶಸ್ತ್ರಚಿಕಿತ್ಸೆಗಳಾಗಿದ್ದು ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತಲೇ ಇವೆ. ಇದರಿಂದ ಕುಟುಂಬವು ಅಪಾರ್ಟ್‌ಮೆಂಟ್ ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದೆ. ಆಗಿನಿಂದ ನೀ ಸಣ್ಣಪುಟ್ಟ ಡಂಪ್ಲಿಂಗ್ ವ್ಯಾಪಾರ ನಡೆಸುವ ಮೂಲಕ ಜೀವನ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ.
ಡಿಸೆಂಬರ್ 7 ರಂದು ನೀ ಹಂಚಿಕೊಂಡ ಪೋಸ್ಟ್‌ನಲ್ಲಿ, “ಎಷ್ಟು ಕಷ್ಟಗಳಿದ್ದರೂ, ನನಗೆ ಬೇಕಾದುದನ್ನು ನಾನು ಪಡೆಯುತ್ತೇನೆ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ನಾನು ಪ್ರೀತಿಸುವವರನ್ನು ರಕ್ಷಿಸುತ್ತೇನೆ” ಎಂದು ಬರೆದಿದ್ದಾರೆ. ನೀ ಮತ್ತು ಡಿಂಗ್ ಅವರು 2016 ರಿಂದ ವಿವಾಹವಾಗಿದ್ದಾರೆ ಮತ್ತು ದಂಪತಿಗಳು 2020 ರಿಂದ ಮನೆಯಲ್ಲಿ ನೂಡಲ್ಸ್ ಮತ್ತು ಡಂಪ್ಲಿಂಗ್‌ಗಳನ್ನು ತಯಾರಿಸುವ ಮೂಲಕ ಸಂಪಾದಿಸುತ್ತಿದ್ದರು. ಫುಡ್ ಡೆಲಿವರಿಗೆಂದು ಹೊರಗಿದ್ದ ವೇಳೆ ಡಿಂಗ್ ಅವರ ತ್ರಿಚಕ್ರ ವಾಹನವು ಕಾರಿಗೆ ಡಿಕ್ಕಿ ಹೊಡೆದಾಗಿನಿಂದ ಪರಿಸ್ಥಿತಿಯು ಕೆಟ್ಟದಾಗಿದೆ.