ಸಾಮಾಜಿಕ ಮಾಧ್ಯಮಗಳ ಹಾವಳಿ ಹೆಚ್ಚಾದಂತೆ ಅನೇಕ ವಿಡಿಯೋಗಳು ಇಂಟರ್ನೆಟ್ ನಲ್ಲಿ ತುಂಬಿದ್ದು ವಿಶೇಷವೆನಿಸುವ ವಿಡಿಯೋಗಳು ಸಾಕಷ್ಟು ಗಮನ ಸೆಳೆಯುತ್ತವೆ. ಹುಡುಗಿಯರು ಸಾಮಾನ್ಯವಾಗಿ ತಮ್ಮನ್ನ ಪಾಪಾ ಕಾ ಏಂಜೆಲ್ ಅಂದರೆ ಅಪ್ಪನ ದೇವತೆ ಎಂದು ಕರೆದುಕೊಳ್ಳುತ್ತಾರೆ. ಆದರೆ ಇವರೇ ನಿಜವಾದ ಪಾಪಾ ಕಾ ಏಂಜೆಲ್ ಎಂದು ವಿಶೇಷ ವಿಡಿಯೋವೊಂದನ್ನ ಇಂಟರ್ನೆಟ್ ನಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಯುವತಿಯೊಬ್ಬಳು ಟ್ರಾಲಿ ರಿಕ್ಷಾದ ಹಿಂದೆ ಓಡುತ್ತಿದ್ದು ರಿಕ್ಷಾ ಚಾಲಕನಿಗೆ ಸಹಾಯ ಮಾಡುವುದು ಕಾಣುತ್ತದೆ. ಬಂಡಿಯಲ್ಲಿ ಲಗೇಜ್ ಭಾರ ಹೊತ್ತು ರಿಕ್ಷಾ ತುಳಿಯುತ್ತಿದ್ದ ವ್ಯಕ್ತಿಗೆ ಯುವತಿ ನೆರವಾಗಿದ್ದು ರಿಕ್ಷಾವನ್ನು ತಳ್ಳುತ್ತಾಳೆ. ಈ ಮೂಲಕ ಭಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾಳೆ. ಆದಾಗ್ಯೂ, ಸ್ವಲ್ಪ ಸಮಯದ ನಂತರ ದಣಿದ ಅವಳು ತನ್ನ ಸ್ನೇಹಿತನನ್ನು ಸಹಾಯಕ್ಕೆ ಕರೆಯುತ್ತಾಳೆ. ರಿಕ್ಷಾವನ್ನು ಯಶಸ್ವಿಯಾಗಿ ತಳ್ಳಿದ ನಂತರ ಚಾಲಕನಿಗೆ ಯುವತಿ ಊಟದ ಬಾಕ್ಸ್ ಮತ್ತು ನೀರಿನ ಬಾಟಲ್ ನೀಡುತ್ತಾಳೆ.
ವೀಡಿಯೊ ಪೋಸ್ಟ್ ಮಾಡಿದ ನಂತರ ತಕ್ಷಣವೇ ವೈರಲ್ ಆಗಿದೆ. ಕೆಲವರು ಇದನ್ನು ವೀವ್ಸ್ ಮತ್ತು ಲೈಕ್ಸ್ ಪಡೆಯುವ ಗಿಮಿಕ್ ಎಂದು ಹೈಲೈಟ್ ಮಾಡಿದರೆ, ಇತರರು ಬಡ ವ್ಯಕ್ತಿಗೆ ಸಹಾಯ ಮಾಡಿದ್ದಕ್ಕಾಗಿ ಯುವತಿಯನ್ನು ಶ್ಲಾಘಿಸಿದ್ದಾರೆ.