ದೇಹದಲ್ಲಿರುವ ಅನಗತ್ಯ ಕೂದಲನ್ನು ಪ್ರತಿಯೊಬ್ಬರೂ ಸ್ವಚ್ಛಗೊಳಿಸಲು ಬಯಸ್ತಾರೆ. ಅದ್ರಲ್ಲೂ ಮಹಿಳೆಯರು ಇದಕ್ಕೆ ಹೆಚ್ಚಿನ ಗಮನ ನೀಡ್ತಾರೆ. ಕೈ, ಕಾಲಿನ ಮೇಲಿರುವ ಕೂದಲನ್ನು ಕೂಡ ಶೇವ್ ಮಾಡ್ತಾರೆ. ಕಂಕುಳ ಕೂದಲನ್ನು ಅತ್ಯಗತ್ಯವಾಗಿ ಮಾಡ್ತಾರೆ. ಅಲ್ಲಿ ಕೂದಲಿದ್ದರೆ ಅಸಹ್ಯ, ನಾಚಿಕೆ ಎಂಬುದು ಅವರ ಅಭಿಪ್ರಾಯ. ಶೇವ್ ಮಾಡದೆ ನಾಲ್ಕೈದು ದಿನ ಕಳೆದಿದ್ದರೆ ಬಹುತೇಕ ಮಹಿಳೆಯರು ಸ್ಲಿವ್ ಲೆಸ್ ಬಟ್ಟೆ ಧರಿಸುವುದಿಲ್ಲ. ಆದ್ರೆ ಕೆಲವೇ ಕೆಲವು ಮಂದಿ ಕೂದಲನ್ನು ಹಾಗೆ ಬಿಡ್ತಾರೆ. ಇದ್ರಲ್ಲಿ ಟೇಲರ್ ಟಿಲ್ಟ್ ಕೂಡ ಒಬ್ಬಳು.
ಟಿಕ್ ಟಾಕ್ ನಲ್ಲಿ ಟೇಲರ್ ಟಿಲ್ಟ್ ಹೆಚ್ಚು ಪ್ರಸಿದ್ಧಿ ಪಡೆದಿದ್ದಾಳೆ. ಆಕೆ ವಿಡಿಯೋ ಫೋಟೋಕ್ಕೆ ನೆಗೆಟಿವ್ ಕಮೆಂಟ್ ಹೆಚ್ಚಿಗೆ ಬರ್ತಿದೆ. ಇದಕ್ಕೆ ಕಾರಣ ಆಕೆ ಕಂಕುಳಲ್ಲಿರುವ ಕೂದಲು. 10 ವರ್ಷಗಳಿಂದ ಕಂಕುಳಲ್ಲಿರುವ ಕೂದಲನ್ನು ಆಕೆ ತೆಗೆದಿಲ್ಲ. ಹಾಗೆಯೇ ಫೋಟೋಗಳನ್ನು ಹಾಕ್ತಾಳೆ. ಇದಕ್ಕೆ ಅನೇಕರು ಅಸಹ್ಯವೆಂದು ಕಮೆಂಟ್ ಮಾಡ್ತಾರೆ.
ಇತ್ತೀಚಿಗೆ ಟೇಲರ್ ಹಂಚಿಕೊಂಡ ವಿಡಿಯೋ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದಕ್ಕೆ ಕಾರಣ ಟೇಲರ್, ಕಂಕಳ ಬಳಿ ರೇಸರ್ ಹಿಡಿದು, ಇದನ್ನು ತೆಗೆಯಲಾ ಎಂದು ಕೇಳಿದ್ದಾಳೆ. ನಂತ್ರ ರೇಸರ್ ಕೆಳಗೆ ಹಾಕ್ತಾಳೆ. ಈ ವಿಡಿಯೋ ನೋಡಿರುವ ಜನರು, ಚಿತ್ರವಿಚಿತ್ರ ಕಮೆಂಟ್ ಮಾಡ್ತಿದ್ದಾರೆ. ಮತ್ತೆ ಕೆಲವರು ಟೇಲರ್ ಬೆಂಬಲಕ್ಕೆ ಬಂದಿದ್ದಾರೆ. ಆಕೆ ತನಗಿಷ್ಟವಾದದ್ದನ್ನು ಮಾಡ್ತಿದ್ದಾಳೆ. ಅದ್ರಲ್ಲೇನಿದೆ ಎಂದು ಕೇಳಿದ್ದಾರೆ. ಒಂದು ವೇಳೆ ಶೇವ್ ಮಾಡಿದ್ರೂ ನಾಲ್ಕು ದಿನಗಳಲ್ಲಿ ಮತ್ತೆ ಕೂದಲು ಬರುತ್ತದೆ ಎಂದು ಬರೆದಿದ್ದಾರೆ.