ಮೂಗಿನೊಳಗೆ ಸೊಳ್ಳೆಯೋ ಅಥವಾ ಬೇರೆ ಯಾವುದೋ ಸಣ್ಣ-ಪುಟ್ಟ ವಸ್ತುಗಳು ಹೋದರೆ ಸಾಕು ತಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬಾಕೆಯ ಮೂಗಿನೊಳಗೆ ಚಮಚದಂತಹ ಮರದತುಂಡುಗಳು (ಚಾಪ್ ಸ್ಟಿಕ್) ಇರುವುದು ಪತ್ತೆಯಾಗಿದೆ. ಇದು ಬರೋಬ್ಬರಿ 1.4 ಇಂಚು ಹಾಗೂ 2 ಇಂಚು ಉದ್ದವಿತ್ತು.
ಹೌದು, ಇಬ್ಬರು ಸಹೋದರಿಯರ ನಡುವೆ ನಡೆದ ಜಗಳದಲ್ಲಿ ಒಬ್ಬಾಕೆಯ ಮೂಗಿನೊಳಗೆ ಮರದ ತುಂಡುಗಳು (ಚಾಪ್ ಸ್ಟಿಕ್) ಹೋಗಿರುವ ಆಘಾತಕಾರಿ ಘಟನೆ ತೈವಾನ್ ನಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಸಹೋದರಿಯರಿಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಒಬ್ಬಾಕೆ ತನ್ನ ಸಹೋದರಿ ಮೇಲೆ ಚಾಪ್ ಸ್ಟಿಕ್ ನಲ್ಲಿ ದಾಳಿ ಮಾಡಿದ್ದಾಳೆ. ಇದರಿಂದ ಯುವತಿಯ ಮೂಗಿನಿಂದ ರಕ್ತ ಸೋರಲಾರಂಭಿಸಿದೆ. ಕೂಡಲೇ ಆಸ್ಪತ್ರೆಗೆ ದೌಡಾಯಿಸಿದ ಯುವತಿಯನ್ನು ವೈದ್ಯರು ಪರೀಕ್ಷಿಸಿದ್ದಾರೆ. ಆದರೆ ಎಕ್ಸ್ ರೇ ನಲ್ಲಿ ಗಂಭೀರ ಪರಿಣಾಮವೇನು ಕಂಡುಬಂದಿಲ್ಲ.
ಸೆಕೆಂಡ್ ಪಿಯುಸಿ ಫಲಿತಾಂಶದ ಬಗ್ಗೆ ಸಚಿವ ಸುರೇಶ್ ಕುಮಾರ್ ಮಾಹಿತಿ: ಕಲಿಕಾ ನಿರಂತರತೆಗೆ ಕಾರ್ಯಪಡೆ ಕಾರ್ಯಾರಂಭ
ಆದರೆ ಮನೆಗೆ ಮರಳಿದ ಒಂದು ವಾರದ ಬಳಿಕ ಮನೆಯಲ್ಲಿ ಸೋದರಿ ಹಲ್ಲೆಗೆ ಬಳಸಿದ ಚಾಪ್ ಸ್ಟಿಕ್ ಗಳು ಕಾಣೆಯಾಗಿರುವುದನ್ನು ಕಂಡ ಯುವತಿಗೆ ಸಂಶಯ ಮೂಡಿದೆ. ಕೂಡಲೇ ಕನ್ನಡಿಯಲ್ಲಿ ತನ್ನ ಮೂಗನ್ನು ಪರೀಕ್ಷಿಸಿದ ಯುವತಿಗೆ ಬೂದು ಬಣ್ಣದ ವಸ್ತು ಕಂಡುಬಂದಿದೆ. ಮತ್ತೆ ಆಸ್ಪತ್ರೆಗೆ ಭೇಟಿ ನೀಡಿದ ಯುವತಿಯನ್ನು ಪರೀಕ್ಷಿಸಿದ ವೈದ್ಯರು ಮೂಗಿನೊಳಗಿದ್ದ ಎರಡು ತುಂಡುಗಳನ್ನು ಗುರುತಿಸಿದ್ದಾರೆ. ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಅವನ್ನು ಹೊರತೆಗೆಯಲಾಯಿತು. ಅದೃಷ್ಟವಶಾತ್ ಯುವತಿ ಗಂಭೀರ ಗಾಯಗಳಾಗದೆ ಪಾರಾಗಿದ್ದಾಳೆ.