ಪಕ್ಕದ ಮನೆಯವರು ಸದಾ ನಿಮ್ಮ ಮೇಲೆ ಕಣ್ಣಿಡುವುದರಿಂದ ನಿಮಗೆ ಭಾರೀ ಕಿರಿಕಿರಿಯಾಗುವ ಅನುಭವ ಆಗಿದೆಯೇ ?
ಇಂಥದ್ದೇ ಮನಃಸ್ಥಿತಿಯ ಮಂದಿಯ ಮನೆಯ ಪಕ್ಕದ ಮನೆಯಲ್ಲಿರುವ ದಂಪತಿಗಳನ್ನು ಗುರಿಯಾಗಿಸಿ, ಅವರ ಮನೆಯತ್ತ ಐದು ಸಿಸಿಟಿವಿ ಕ್ಯಾಮೆರಾಗಳನ್ನು ಇಡುವ ಮೂಲಕ ಅವರ ವಿರುದ್ಧ ಸರ್ವೇಕ್ಷಣಾ ಯುದ್ಧ ಸಾರಲಾಗಿತ್ತು.
ಇದರ ವಿಡಿಯೋ ಮಾಡಿದ ಮೆಗನ್ ರೀಯ್ಡ್, ಇಂಥ ಕಿರಿಕಿರಿ ನೆರೆಹೊರೆಯವರಿಂದ ತಮಗೆ ಅದೆಂಥಾ ಕಿರುಕುಳವಾಗುತ್ತಿದೆ ಎಂದು ಟಿಕ್‌ಟಾಕ್‌ನಲ್ಲಿ ತೋರಿದ್ದಾರೆ. ತಮ್ಮ ಈ ಹುಚ್ಚು ನೆರೆಹೊರೆಯವರ ವಕ್ರದೃಷ್ಟಿಯಿಂದ ರಕ್ಷಿಸಿಕೊಳ್ಳಲು ತಮ್ಮ ಮನೆಯಂಗಳದಲ್ಲಿ ಬಟ್ಟೆಗಳ ಸಾಲನ್ನು ಅಡ್ಡವಿಟ್ಟಿದ್ದಾರೆ ಈ ದಂಪತಿ.
ಹೀಗೆ ಬಟ್ಟೆಗಳನ್ನು ಹಾಕಿದ್ದಕ್ಕೆ ದಂಪತಿ ವಿರುದ್ಧ ದೂರು ಕೊಟ್ಟು ಪೊಲೀಸರನ್ನು ಕರೆಯಿಸಿದ್ದಾರೆ ಪಕ್ಕದ ಮನೆಯವರು…! ಇಂಥದ್ದಕ್ಕೆಲ್ಲಾ ಭಯೋತ್ಪಾದಕ ನಿಗ್ರಹ ದಳದ ಪೊಲೀಸರಿಗೆ ಕರೆ ಮಾಡಿದ ಪಕ್ಕದ ಮನೆಯವರ ಹುಚ್ಚಾಟ ಕಂಡು ಪೊಲೀಸರಿಗೇ ನಗು ತಡೆಯಲಾಗಿಲ್ಲ ಎಂದು ಮೆಗನ್ ತಿಳಿಸಿದ್ದಾರೆ.