alex Certify ಅತ್ತೆ – ಸೊಸೆ ಹೀಗೂ ಇರ್ತಾರೆ ನೋಡಿ…… ರಾ ರಾ ರೆಡ್ಡಿ ಹಾಡಿಗೆ ಈ ಜೋಡಿಯ ಸಕತ್​ ಸ್ಟೆಪ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತೆ – ಸೊಸೆ ಹೀಗೂ ಇರ್ತಾರೆ ನೋಡಿ…… ರಾ ರಾ ರೆಡ್ಡಿ ಹಾಡಿಗೆ ಈ ಜೋಡಿಯ ಸಕತ್​ ಸ್ಟೆಪ್​

ಅತ್ತೆ-ಸೊಸೆಯಂದಿರೂ ಪ್ರೀತಿಯಿಂದ ಇರಲು ಸಾಧ್ಯ ಎಂದು ಹೇಳಿದರೆ ಅದನ್ನು ನಂಬದವರೇ ಹಲವರು. ಇದಕ್ಕೆ ಕಾರಣ ಇಂದಿನ ಧಾರಾವಾಹಿಗಳು ಹಾಗೂ ಸಿನಿಮಾ. ಇದರಲ್ಲಿ ಅತ್ತೆ- ಸೊಸೆ ಎಂದರೆ ಸದಾ ಜಗಳ ಮಾಡುತ್ತಿರುವವರೇ ಎನ್ನುವ ಭಾವನೆ ಮೂಡಿಸಲಾಗುತ್ತದೆ. ಅಸಲಿಗೆ ನಿಜ ಜೀವನದಲ್ಲಿ ಇದು ಸಂಪೂರ್ಣ ಸತ್ಯವಲ್ಲ. ಉತ್ತಮ ಸಂಬಂಧ ಹೊಂದಿರುವ ಅತ್ತೆ-ಸೊಸೆಯಂದಿರೂ ಇರುತ್ತಾರೆ.
ಅತ್ತೆ-ಸೊಸೆಯ ಮಧುರ ಬಾಂಧವ್ಯದ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

ಕೋರಿಯನ್ ಅತ್ತೆಯೊಂದಿಗೆ ಭಾರತೀಯ ಸೊಸೆ ತೆಲುಗು ಸಿನೆಮಾದ ಈ ಜನಪ್ರಿಯ ಹಾಡಿಗೆ ನೃತ್ಯ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೋರಿಯಾದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿರುವ ಅತ್ತೆ-ಸೊಸೆ ಅದ್ಭುತವಾಗಿ ನೃತ್ಯಕ್ಕೆ ಸ್ಟೆಪ್​ ಹಾಕಿದ್ದಾರೆ. ರಾ ರಾ ರೆಡ್ಡಿ, ಐ ಆ್ಯಮ್​ ರೆಡಿ ಹಾಡಿಗೆ ಇವರಿಬ್ಬರೂ ಉತ್ಸಾಹದಿಂದ ಕುಣಿದ ರೀತಿ ನೆಟ್ಟಿಗರನ್ನು ಬೆರಗಾಗಿಸಿದೆ.

​ಹ್ಯಾನ್​ಬ್ಯಾಕ್​ ಇದು ಕೋರಿಯನ್ ಮಹಿಳೆಯರ ಸಾಂಪ್ರದಾಯಿಕ ಉಡುಗೆ. ಕೋರಿಯನ್ ಅರಮನೆಯ ಹೊರಗೆ ಇವರಿಬ್ಬರೂ ನರ್ತಿಸಿದ್ದಾರೆ. ಸೊಸೆ ಗುಲಾಬಿ ಬಣ್ಣದ ಹ್ಯಾನ್​ಬ್ಯಾಕ್​ ಧರಿಸಿದ್ದರೆ, ಅತ್ತೆ ನೀಲಿ ಬಣ್ಣದ ಹ್ಯಾನ್​ಬ್ಯಾಕ್​ ಧರಿಸಿದ್ದಾಳೆ.

ಈ ಜಗತ್ತಿನಲ್ಲಿ ಎಷ್ಟೇ ಕತ್ತಲು ತುಂಬಿದ್ದರೂ ಪ್ರೀತಿ ಅದನ್ನು ಗೆಲ್ಲುತ್ತದೆ, ಸದಾ ಪ್ರೀತಿಸಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಇದಾಗಲೇ 75 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...