ಬಿಹಾರದ ಮುಜಫರ್ಪುರದಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಹೊರ ಬಿದ್ದಿದೆ. ಸಂತಾನ ಹರಣ ಶಸ್ತ್ರಚಿಕಿತ್ಸೆಯಾಗಿ ಎರಡು ವರ್ಷಗಳ ನಂತ್ರ ಮಹಿಳೆ ಗರ್ಭ ಧರಿಸಿದ್ದಾಳೆ. ಘಟನೆ ನಡೆದ ನಂತ್ರ ಮಹಿಳೆ ಗ್ರಾಹಕ ನ್ಯಾಯಾಲಯಕ್ಕೆ ತಲುಪಿದ್ದಾಳೆ.
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಮೊಕದ್ದಮೆ ದಾಖಲಿಸಿರುವ ಮಹಿಳೆ 11 ಲಕ್ಷ ರೂ. ಪರಿಹಾರ ನೀಡುವಂತೆ ಹೇಳಿದ್ದಾಳೆ. ಐದನೇ ಮಗುವನ್ನು ನೋಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಅದಕ್ಕೆ 11 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಹಿಳೆ ಹೇಳಿದ್ದಾಳೆ.
ಮುಜಫರ್‌ಪುರದ ಮೋತಿಪುರ ಬ್ಲಾಕ್‌ನ ನಿವಾಸಿ ಫೂಲ್ ಕುಮಾರಿ, ಜುಲೈ 27, 2019 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬ ಯೋಜನೆ ಕಾರ್ಯಕ್ರಮದಡಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡಿದ್ದಳು. ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿದ್ದವು. ದುರ್ಬಲ ಆರ್ಥಿಕ ಪರಿಸ್ಥಿತಿಗಳಿಂದಾಗಿ ಮಹಿಳೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಇದಾದ ಎರಡು ವರ್ಷಗಳ ನಂತರ ಮಹಿಳೆ ಮತ್ತೆ ಗರ್ಭಿಣಿಯಾದ್ದಳು.
ಕೆಲ ಸಂತಾನಹರಣ ಶಸ್ತ್ರಚಿಕಿತ್ಸೆ ವಿಫಲವಾಗುತ್ತದೆ. ಚಿಕಿತ್ಸೆಗೊಳಗಾದವರಿಗೆ 30 ಸಾವಿರ ರೂಪಾಯಿಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ.