ಗರ್ಭಿಣಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಮುಚ್ಚಲ್ಪಟ್ಟ ಪೆಟ್ರೋಲ್ ಸ್ಟೇಷನ್ ಬಳಿ ಮಗುವಿಗೆ ಜನ್ಮ ನೀಡಿದ್ದಾಳೆ. ತನ್ನ ಸಂಗಾತಿ ಮತ್ತು ಸೂಲಗಿತ್ತಿ ಸ್ನೇಹಿತೆಯ ಸಹಾಯದಿಂದ ಪಿಕ್ ಅಪ್ ಟ್ರಕ್‌ನ ಹಿಂಭಾಗದಲ್ಲಿ ಜನ್ಮ ನೀಡಿರುವ ಘಟನೆ ಇಂಗ್ಲೆಂಡ್ ನ ಲಾಂಚೆಸ್ಟರ್ ನಲ್ಲಿ ನಡೆದಿದೆ.
ಜನಸಾಮಾನ್ಯರಿಗೆ ಬಿಗ್ ಶಾಕ್: ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್, ಡೀಸೆಲ್ ಬೆಲೆ ಭಾರಿ ಹೆಚ್ಚಳ – ಇವತ್ತೂ ದರ ಪರಿಷ್ಕರಣೆ
ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿರುವ ಸ್ಟೆಫನಿ ರಿಚರ್ಡ್ಸನ್ ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೆರಿಗೆ ನೋವು ಜಾಸ್ತಿಯಾಗಿದ್ದರಿಂದ ಲಾಂಚೆಸ್ಟರ್‌ನ ಜೆಟ್ ನಿಲ್ದಾಣದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ.
ಪೆಟ್ರೋಲ್ ನಿಲ್ದಾಣವು ಮುಚ್ಚಲ್ಪಟ್ಟಿದ್ದರಿಂದ ಸ್ಟೆಫಾನಿಗೆ ಅತ್ಯಂತ ಗೌಪ್ಯತೆ ಸಿಕ್ಕಿದೆ. ಅದೃಷ್ಟವಶಾತ್, ಒಬ್ಬ ಸೂಲಗಿತ್ತಿ ಸ್ನೇಹಿತೆ ಅವರೊಂದಿಗೆ ಪ್ರಯಾಣಿಸುತ್ತಿದ್ದಳು. ಆಕೆಯ ಸಹಾಯದಿಂದ, ಸ್ಟೆಫಾನಿ ಪಿಕ್ ಅಪ್ ವಾಹನದ ಹಿಂಭಾಗದಲ್ಲೇ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಚೆನ್ನಾಗಿರುತ್ತೆ ‘ನೇಚರ್’ ಜೊತೆ ಬೆಳೆದ ಮಕ್ಕಳ ‘ಫ್ಯೂಚರ್’
ಇನ್ನು ಮಹಿಳೆ ಹೆರಿಗೆ ವೇಳೆ ಕತ್ತಲಾಗಿತ್ತು. ನಿಲ್ದಾಣದ ಬಳಿ ಯಾವುದೇ ವಿದ್ಯುತ್ ದೀಪದ ಬೆಳಕಿರಲಿಲ್ಲ. ಟಾರ್ಚ್ ಲೈಟ್ ಬೆಳಕಿನ ಸಹಾಯದಿಂದ ಸೂಲಗಿತ್ತಿ ಗೆಳತಿ ಹೆರಿಗೆ ಮಾಡಿಸಿದ್ದಾಳೆ. ಮಗು ಜನಿಸಿದ ಬಳಿಕ ದಂಪತಿಗಳು ಉತ್ತರ ಡರ್ಹಾಮ್ ವಿಶ್ವವಿದ್ಯಾಲಯದ ಆಸ್ಪತ್ರೆಗೆ ತೆರಳಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.