ಈಗೀಗ ವಿಮಾನಗಳಲ್ಲಿ, ಉದ್ಯೋಗಿಗಳ ವಿರುದ್ಧ ಹಿಂಸಾಚಾರದ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಪ್ರಯಾಣಿಕರ ಹಿಂಸಾತ್ಮಕ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಅಂಥದ್ದೇ ಒಂದು ಘಟನೆ ಮಿಯಾಮಿ ಅಂತರಾಷ್ಟ್ರೀಯ ಅಮೇರಿಕನ್ ಏರ್ಲೈನ್ಸ್ನಲ್ಲಿ ನಡೆದಿದೆ.
25 ವರ್ಷದ ಮಹಿಳೆಯೊಬ್ಬಳು ವಿಮಾನ ನಿಲ್ದಾಣದಲ್ಲಿ ಏರ್‌ಲೈನ್‌ನ ಉದ್ಯೋಗಿಯ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕ್ಯಾಮಿಲಿಯಾ ಮೆಕ್‌ಮಿಲ್ಲಿ ಎಂದು ಗುರುತಿಸಲಾದ ಮಹಿಳೆ, ತೀವ್ರ ವಾಗ್ವಾದದ ನಂತರ ಏರ್‌ಲೈನ್‌ನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾಳೆ.
ಓನ್ಲಿ ಇನ್ ಡೇಡ್ ಇದನ್ನು ಶೇರ್ ಮಾಡಿಕೊಂಡಿದೆ. ಈ ಘಟನೆಯು ಅಮೆರಿಕನ್ ಏರ್ಲೈನ್ಸ್ ಗೇಟ್ D-39 ನಲ್ಲಿ ಸಂಭವಿಸಿದೆ. ಕ್ಯಾಮಿಲಿಯಾ ತನ್ನ ಮಕ್ಕಳೊಂದಿಗೆ ಅಲಬಾಮಾದಿಂದ ನ್ಯೂಯಾರ್ಕ್ ನಗರಕ್ಕೆ ಪ್ರಯಾಣಿಸುತ್ತಿದ್ದಳು. ವಿಮಾನ ನಿಲ್ದಾಣದಲ್ಲಿ ತನ್ನ ಮಕ್ಕಳನ್ನು ಹುಡುಕಲು ಸಾಧ್ಯವಾಗದ ಕಾರಣ ಮಹಿಳೆ ತಾಳ್ಮೆ ಕಳೆದುಕೊಂಡು ಗೇಟ್ ಏಜೆಂಟ್ ಮೇಲೆ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ಈಕೆಯ ಮಕ್ಕಳು ಈಕೆಗೆ ತಿಳಿಸದೇ ಸ್ನಾನದ ಕೋಣೆಗೆ ತೆರಳಿದ್ದು ಇಷ್ಟೆಲ್ಲಾ ಆವಾಂತರಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ ಮಹಿಳೆ ಕಿರುಚುತ್ತಿರುವುದನ್ನು ಕಾಣಬಹುದು. ನಂತರ ಆಕೆ ಕೂಗುತ್ತಾ ಮೇಜಿನ ಮೇಲಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಒಡೆಯುತ್ತಿರುವುದನ್ನು ನೋಡಬಹುದು. ಈ ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.