ಭುವನೇಶ್ವರ: ಮಹಿಳೆಯೊಬ್ಬಳು ರೇಲ್ವೇ ಕೋಚ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಹೌರಾ-ಯಶವಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಮೇರಿ ಸಹೆಲಿ ತಂಡದ ಭಾಗವಾದ ಸ್ವಯಂ ಸೇವಕರ ಸಹಾಯದಿಂದ ಆಯೇಷಾ ಖತುನ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಾಥಮಿಕ ಆರೈಕೆ ಪಡೆದ ನಂತರ ಬಾಣಂತಿ ಆಯೆಷಾ ಹಾಗೂ ನವಜಾತ ಶಿಶುವನ್ನು ಭುವನೇಶ್ವರ ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಲಾಯಿತು.
27 ವರ್ಷದ ಆಯೇಷಾ ಹೌರಾ-ಯಶವಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದಳು. ರೈಲು ಕಟಕ್ ನಿಂದ ಹೊರಟಾಗ ಅವರಿಗೆ ತೀವ್ರ ಹೆರಿಗೆ ನೋವು ಉಂಟಾಯಿತು. ಇದನ್ನು ಕಂಡ ಟಿಕೆಟ್ ಕಲೆಕ್ಟರ್ ಕೂಡಲೇ ಭುವನೇಶ್ವರ ರೈಲ್ವೇ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ರು. ಈ ವಿಚಾರ ತಿಳಿಯುತ್ತಲೇ ರೈಲ್ವೇ ಸಿಬ್ಬಂದಿ ಜೊತೆ ಮೇರಿ ಸಹೇಲಿ ತಂಡ ಮತ್ತು ವೈದ್ಯರು ಕೈ ಜೋಡಿಸಿದ್ದಾರೆ ಎಂದು ಭುವನೇಶ್ವರ ರೈಲು ನಿಲ್ದಾಣದ ನಿರ್ದೇಶಕ ಚಿತ್ತರಂಜನ್ ನಾಯಕ್ ಹೇಳಿದ್ದಾರೆ.
ಸೆಲ್ಫಿ ತೆಗೆದುಕೊಳ್ಳುವಾಗಲೇ ನಡೆದಿದೆ ಘೋರ ದುರಂತ
ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ ಮೇರೆಗೆ ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಲಾಯ್ತು. ಇನ್ನು ಸಕಾಲ ಸಮಯದಲ್ಲಿ ನೆರವಿಗೆ ಧಾವಿಸಿದ್ದಕ್ಕೆ ರೈಲ್ವೇ ಸಿಬ್ಬಂದಿಗೆ ಆಯೇಷಾ ಕೃತಜ್ಞತೆ ಸಲ್ಲಿಸಿದರು.