
ಮದುವೆಯಾಗದೆ ತಾಯಿಯಾಗೋದು ವಿದೇಶದಲ್ಲಿ ಸಾಮಾನ್ಯ ಸಂಗತಿ. ಅನೇಕ ಹುಡುಗಿಯರು, ಮದುವೆಯನ್ನು ಇಷ್ಟಪಡೋದಿಲ್ಲ. ಆದ್ರೆ ಮಕ್ಕಳ ಪಾಲನೆಯನ್ನು ಪ್ರೀತಿಸ್ತಾರೆ. ಅದ್ರಲ್ಲಿ ಬ್ರಿಟನ್ ಲುಸಿಂಡಾ ಹಾರ್ಟ್ ಕೂಡ ಒಬ್ಬಳು. ಲುಸಿಂಡಾ ತನ್ನ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ಆಕೆಗೆ ಮೊದಲಿನಿಂದಲೇ ಮದುವೆಯಾಗಲು ಇಷ್ಟವಿರಲಿಲ್ಲವಂತೆ. ಆದ್ರೆ ಮಕ್ಕಳನ್ನು ಬೆಳೆಸುವ ಆಸೆ ಇತ್ತಂತೆ. ಆಕೆ 2012 ರಲ್ಲಿ, 36 ವರ್ಷ ವಯಸ್ಸಿನಲ್ಲಿದ್ದಾಗ ತಾಯಿಯಾಗಲು ಬಯಸಿದ್ದಳಂತೆ. ಅದೇ ಕಾರಣಕ್ಕೆ ಐವಿಎಫ್ ಮೊರೆ ಹೋಗಿದ್ದಾಳೆ. ವೀರ್ಯ ದಾನದ ವಿಷಯದಲ್ಲಿ ಡೆನ್ಮಾರ್ಕ್ ಅಗ್ರಸ್ಥಾನದಲ್ಲಿದೆ ಎಂದ ಲುಸಿಂಡಾ, ಆಕೆಯ ಕ್ಲೀನಿಕ್ ಸಲಹೆಯಂತೆ ಯುರೋಪಿಯನ್ ಸ್ಪೆರ್ಮ್ ಬ್ಯಾಂಕ್ ಸಂಪರ್ಕಿಸಿದ್ದಳಂತೆ. ತನ್ನ ನಾಲ್ಕು ಎಗ್ಸ್ ಗಳನ್ನು ಫ್ರೀಜ್ ಮಾಡಿದ್ದಳಂತೆ. ಐದು ದಿನಗಳ ನಂತ್ರ ವೀರ್ಯ ದಾನಿ ಸಹಾಯದಿಂದ ಆಕೆ ಐವಿಎಫ್ ಗೆ ಒಳಗಾಗಿದ್ದಳು. ಆದ್ರೆ ಅದು ಯಶಸ್ವಿಯಾಗಿರಲಿಲ್ಲ.
ಎರಡನೇ ಪ್ರಯತ್ನದಲ್ಲಿ ಲುಸಿಂಡಾಗೆ ಒಂದು ಮುದ್ದಾದ ಮಗಳು ಜನಿಸಿದಳು. ಮಗುವಿಗೆ ಮೂರು ವರ್ಷವಾದ್ಮೇಲೆ ಮತ್ತೊಮ್ಮೆ ಐವಿಎಫ್ ಪ್ರಯತ್ನ ನಡೆದಿತ್ತು. ಆದ್ರೆ ಅದು ವಿಫಲವಾಗಿತ್ತು. ಕೊನೆಯ ಎಗ್ ನಲ್ಲಿ ಇನ್ನೊಂದು ಮಗು ಜನಿಸಿದೆ. ಈಗ ಲುಸಿಂಡಾ ಎರಡು ಮಕ್ಕಳ ತಾಯಿ. ಮಗಳಿಗೆ ಹದಿನೆಂಟು ವರ್ಷವಾದ್ಮೇಲೆ ವೀರ್ಯ ದಾನಿಯನ್ನು ನೋಡುವ ಅವಕಾಶ ಸಿಗುತ್ತದೆ. ಆಗ್ಲೇ ನಾನು ಅವರನ್ನು ಭೇಟಿಯಾಗ್ತೇನೆ. ಅವರಿಗೆ ಮಗು ನೀಡಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಆದ್ರೆ ನನಗೆ ಸಂಗಾತಿಯ ಅಗತ್ಯವಿಲ್ಲ. ನನ್ನ ಮಕ್ಕಳನ್ನು ನಾನೊಬ್ಬಳೇ ಬೆಳೆಸಬಲ್ಲೆ ಎಂದು ಲುಸಿಂಡಾ ಹೇಳಿದ್ದಾಳೆ.
ಮಗು ಬೇಕು, ಸಂಗಾತಿ ಬೇಡ ಎನ್ನುವ ಮಹಿಳೆಯರು ಇಲ್ಲವೆ ಸಂಗಾತಿ ಇಲ್ಲದ ಒಂಟಿ ಮಹಿಳೆಯರು ಮಕ್ಕಳಿಗಾಗಿ ಒನ್ ನೈಟ್ ಅಥವಾ ಪಬ್ ಕ್ಲಾರ್ಕ್ ರೂಮಿಗೆ ಹೋಗಬೇಕಾಗಿಲ್ಲ. ಐವಿಎಫ್ ಮೂಲಕ ಮಕ್ಕಳನ್ನು ಪಡೆಯಬಹುದು ಎನ್ನುತ್ತಾಳೆ ಲುಸಿಂಡಾ.