ಕೆಲವೊಮ್ಮೆ ಕಾಲಿಗೆ, ಕೈಗೆ ಹಾಕುವ ಉಂಗುರಗಳನ್ನು ತೆಗೆಯುವುದು ಕಷ್ಟವಾಗಿರುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಅನೇಕ ವರ್ಷಗಳಿಂದ ಉಂಗುರ ಹಾಗೆಯೇ ಇದ್ದರೆ, ನಾವು ದಪ್ಪಗಾದರೆ ಇಲ್ಲವೇ ಬೆಳೆಯುತ್ತಿದ್ದರೆ ಉಂಗುರಗಳು ಅಲ್ಲಿಯೇ ಸಿಲುಕಿ ಬಿಡುತ್ತವೆ.
ಅಂಥದ್ದೇ ಒಂದು ಘಟನೆ ಇದೀಗ ವೈರಲ್ ಆಗಿದೆ. ಬೆರಳಿನಲ್ಲಿ ಉಂಗುರ ಸಿಲುಕಿಕೊಂಡಿರುವುದಕ್ಕೆ ಇದು ಸುದ್ದಿಯಾಗಿದ್ದಲ್ಲ. ಬದಲಿಗೆ 15 ವರ್ಷಗಳ ಬಳಿಕ ಈ ಉಂಗುರವನ್ನು ಹೊರಕ್ಕೆ ತೆಗೆಯಲಾಗಿದೆ.
ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಬೆರಳುಗಳಿಗೆ ಮೂರು ಉಂಗುರಗಳನ್ನು ಹಾಕಿಕೊಂಡಿದ್ದನ್ನು ನೋಡಬಹುದು. ಚಿಕ್ಕವಳಿದ್ದಾಗ ಹಾಕಿಕೊಂಡಿದ್ದ ಉಂಗುರವನ್ನು ಆಕೆ ತೆಗೆದೇ ಇರಲಿಲ್ಲ. ಒಂದೂವರೆ ದಶಕ ಹಾಗೆಯೇ ಇಟ್ಟುಕೊಂಡಿದ್ದಳು. ನಂತರ ಎಷ್ಟೆಲ್ಲಾ ಸರ್ಕಸ್ ಮಾಡಿದರೂ ಅದನ್ನು ತೆಗೆಯಲು ಬರಲಿಲ್ಲ.
ಕೊನೆಗೆ 15 ವರ್ಷಗಳ ಬಳಿಕ ಆಭರಣ ವ್ಯಾಪಾರಿಯೊಬ್ಬ ವಿವಿಧ ರೀತಿಯ ಆಯುಧ ಬಳಸಿ ಅದನ್ನು ಹೊರಕ್ಕೆ ತೆಗೆದಿದ್ದು, ಇದೀಗ ವೈರಲ್ ಆಗಿದೆ. ಬಹಳ ಶ್ರಮ ವಹಿಸಿ ಇದನ್ನು ತೆಗೆಯಲಾಗಿದೆ.