ತನ್ನ ಮಾಜಿ ಬಾಯ್‌ಫ್ರೆಂಡ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಥಾಯ್ಲೆಂಡ್‌ನ ಯುವತಿಯೊಬ್ಬರು ಆತನ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.
ಬ್ಯಾಂಕಾಕ್‌ನಲ್ಲಿರುವ ಶಾಲಾ ಪಾರ್ಕ್ ಒಂದರಲ್ಲಿ ನಿಂತಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಕಾನೊಕ್ ವಾನ್, ತನ್ನೊಂದಿಗೆ ಸಂಬಂಧ ಸರಿಪಡಿಸಿಕೊಳ್ಳಲು ನಿರಾಕರಿಸಿದ ಮಾಜಿ ಬಾಯ್‌ಫ್ರೆಂಡ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ಮಾನವೀಯತೆ ತೋರಿದ ಸಭಾಪತಿ ಬಸವರಾಜ ಹೊರಟ್ಟಿ
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ. ಆದರೆ ಆ ಬೈಕ್ ಪಕ್ಕ ನಿಲ್ಲಿಸಿದ್ದ ಇನ್ನೂ ಆರು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಡುವಷ್ಟರಲ್ಲಿ ಇಷ್ಟೆಲ್ಲಾ ಹಾನಿ ಆಗಿ ಹೋಗಿತ್ತು.
ಬೆಂಕಿ ಹಚ್ಚಿದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಯ್ ಫ್ರೆಂಡ್ ಜೊತೆಗೆ ಸಂಬಂಧ ಚೆನ್ನಾಗಿದ್ದ ವೇಳೆ 23 ಲಕ್ಷ ರೂಪಾಯಿ ಮೌಲ್ಯದ ಬೈಕ್ ಖರೀದಿಸಿ ಆತನಿಗೆ ಗಿಫ್ಟ್ ಕೊಟ್ಟಿದ್ದ ಈ ಯುವತಿ, ಸಂಬಂಧ ಹಾಳಾದ ಸಿಟ್ಟಿನಲ್ಲಿ ಹೀಗೆ ಮಾಡಿದ್ದಾಳೆ.