ನೀವು ವನ್ಯಜೀವಿ ಉದ್ಯಾನದಲ್ಲಿದ್ದಾಗ, ಆವರಣದ ಹೊರಗೆ ಮುಕ್ತವಾಗಿ ಓಡಾಡಲು ಅವಕಾಶವಿರುವ ಕಾಡು ಪ್ರಾಣಿಗಳ ಹತ್ತಿರ ಹೋಗುವುದು ಒಳ್ಳೆಯದಲ್ಲ.
ಆದರೆ, ಅನೇಕ ಜನರು ಪ್ರಾಣಿಗಳಿಗೆ ಕೆಲವು ತಿಂಡಿಗಳನ್ನು ನೀಡಲು ಅಥವಾ ಕೆಲವು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಅದರ ಹತ್ತಿರ ಹೋಗಲು ಪ್ರಯತ್ನಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಇದು ಗಂಭೀರ ಗಾಯಗಳು, ಸಾವು ಅಥವಾ ಜೈಲು ಶಿಕ್ಷೆಗೂ ಕಾರಣವಾಗಬಹುದು.
ಸ್ನೇಹಿತರೊಂದಿಗೆ ಸೇರಿ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಹೊಡೆದು ಕೊಂದ ಕಿಡಿಗೇಡಿ
ಸಮಂತಾ ಆರ್.ಡೆಹರಿಂಗ್ ಎಂಬುವವರು ಕಾಡು ಪ್ರಾಣಿಯ ಜೊತೆ ಬಹಳ ಹತ್ತಿರಕ್ಕೆ ಹೋಗಿ ಫೋಟೋ ತೆಗೆಯಲು ಪ್ರಯತ್ನಿಸಿದ್ದಾರೆ. ಮೆಚ್ಚುಗೆ ಪಡೆಯುವ ಬದಲು ಆಕೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಮೇ 10 ರಂದು ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿ ಗ್ರಿಜ್ಲಿ ಕರಡಿಯ ಹತ್ತಿರ ಹೋಗಿ ಫೋಟೋ ಕ್ಲಿಕ್ಕಿಸಲು ಪ್ರಯತ್ನಿಸಿದ್ದಾಳೆ. ಅದೃಷ್ಟವಶಾತ್ ಆಕೆ ಅಪಾಯದಿಂದ ಪಾರಾಗಿದ್ದಳು. ಕರಡಿಯು ಆಕೆಯನ್ನು ಬೆದರಿಸುವಂತೆ ಮಾಡಿ ಮತ್ತೆ ಹಿಂದಕ್ಕೆ ಹೋಗಿದೆ.
ಡಾರ್ಸಿ ಆಡ್ಡಿಂಗ್ಟನ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸಣ್ಣ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಮಹಿಳೆಯ ವರ್ತನೆಗೆ ಕಿಡಿಕಾರಿದ್ದಾರೆ. ಇದೊಂದು ಮೂರ್ಖತನದ ಕೆಲಸ ಎಂದು ಜರೆದಿದ್ದಾರೆ.
ಐಟಿ ದಾಳಿಯಲ್ಲಿ ಬಯಲಾಯ್ತು ಭಾರಿ ಅಕ್ರಮ, 250 ಕೋಟಿ ರೂ. ಬ್ಲಾಕ್ ಮನಿ ಪತ್ತೆ –9 ಕೆಜಿ ಚಿನ್ನ ಜಪ್ತಿ; 400 ಕೋಟಿ ಅವ್ಯವಹಾರ
ಜೈಲು ಶಿಕ್ಷೆಯ ಜೊತೆಗೆ, ಡೆಹರಿಂಗ್‌ನನ್ನು ಒಂದು ವರ್ಷದವರೆಗೆ ಯೆಲ್ಲೊಸ್ಟೋನ್‌ನಿಂದ ನಿಷೇಧಿಸಲಾಗಿದೆ. ಆಕೆ $ 1,000 ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ಫೆಡರಲ್ ಕಸ್ಟಡಿಯಲ್ಲಿ ನಾಲ್ಕು ದಿನಗಳನ್ನು ಕಳೆಯಬೇಕಾಗುತ್ತದೆ.
ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದ ವೆಬ್‌ಸೈಟ್ ಹೇಳುವಂತೆ, ಪ್ರವಾಸಿಗರು ಉದ್ಯಾನವನದಲ್ಲಿರುವ ಕರಡಿಗಳು ಮತ್ತು ತೋಳಗಳಿಂದ ಕನಿಷ್ಠ 100 ಗಜಗಳಷ್ಟು ದೂರವಿರಬೇಕು ಎಂದಿದೆ.
https://www.instagram.com/p/COt4i13FprY/?utm_source=ig_embed&utm_campaign=embed_video_watch_again