ಬ್ರೆಜಿಲ್: ಬಾರ್ಬಿ ಗೊಂಬೆ ಅಂದ್ರೆ ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ದೊಡ್ಡವರು ಕೂಡ ಈ ಗೊಂಬೆಯನ್ನು ಇಷ್ಟಪಡುತ್ತಾರೆ. ಯಾರೇನಾದರೂ ಅಂದುಕೊಳ್ಳುತ್ತಾರೋ ಏನೋ ಎಂದು ಕೆಲವರು ಇಂತಹ ಗೊಂಬೆಗಳನ್ನು ಇಟ್ಟುಕೊಳ್ಳುವುದಿಲ್ಲ. ಆದರೆ, ಗೊಂಬೆ ಹೊಂದಲು ವಯಸ್ಸಿನ ಹಂಗಿಲ್ಲ. ಅರೆ, ಇದೇನಿದು ಗೊಂಬೆ ಕಥೆ ಹೇಳುತ್ತಿದ್ದಾರೆ ಅಂದುಕೊಳ್ಳುತ್ತಿದ್ದೀರಾ..? ಅದಕ್ಕೆ ಕಾರಣ ಈ ಸ್ಟೋರಿ.
ಬ್ರೆಜಿಲ್ ನಲ್ಲಿನ ಒಬ್ಬ ವೃದ್ಧೆಗೆ ತಾನು ಚಿಕ್ಕವಳಿದ್ದಾಗ ಬಾರ್ಬಿ ಗೊಂಬೆ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ತನ್ನ ಇಳಿವಯಸ್ಸಿನಲ್ಲಿ ಮೊಮ್ಮಗಳು ಬಾರ್ಬಿ ಗೊಂಬೆಯನ್ನು ಉಡುಗೊರೆಯಾಗಿ ನೀಡಿರುವುದು ಈಕೆಗೆ ಎಲ್ಲಿಲ್ಲದ ಖುಷಿ ತಂದು ಕೊಟ್ಟಿದೆ.
ಸತ್ತವರ ಹಲ್ಲು, ಉಗುರಿನಿಂದ ಆಭರಣ ತಯಾರಿಸ್ತಾಳೆ ಈ ಮಹಿಳೆ….!
ಹೌದು, ಡೋನಾ ಕಾರ್ಮೋಜಾ ಎನ್ನುವ ವೃದ್ಧೆಗೆ ತನ್ನ ಕಿರಿಯ ವಯಸ್ಸಿನಲ್ಲಿ ಗೊಂಬೆಗಳೆಂದರೆ ಬಹಳ ಇಷ್ಟವಿತ್ತಂತೆ. ಆದರೆ ಆ ವೇಳೆ ಆಕೆಗೆ ಬಾರ್ಬಿ ಗೊಂಬೆ ಪಡೆದುಕೊಳ್ಳಲಾಗಲಿಲ್ಲ. ಆದರೆ ತನ್ನ ವೃದ್ಧಾಪ್ಯದ ವೇಳೆ ಮೊಮ್ಮಗಳು ಅಚ್ಚರಿಯ ರೀತಿಯಲ್ಲಿ ಬಾರ್ಬಿ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾಳೆ. ಉಡುಗೊರೆ ಪೊಟ್ಟಣ ತೆರೆಯುತ್ತಿದ್ದಂತೆ ಆಕೆಯ ಕಣ್ಣುಗಳಲ್ಲಿ ಆನಂದಭಾಷ್ಪ ಸುರಿಯಿತು. ತನ್ನ ಹಿಂದೆ ನಿಂತಿದ್ದ ಮೊಮ್ಮಗನಿಗೆ ಗೊಂಬೆ ತೋರಿಸುತ್ತಾ ಖುಷಿ ಪಟ್ಟಿದ್ದಾಳೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಹಲವು ಮಂದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಒಬ್ಬರು ತನಗೆ ಚಿಕ್ಕವಳಿದ್ದಾಗ ಟೆಡ್ಡಿಬೇರ್ ಗೊಂಬೆ ಪಡೆಯಲು ಇಷ್ಟ ಇತ್ತು. ಆದರೆ ಈ ಆಸೆ ನೆರವೇರಿಲ್ಲ ಎಂಬ ಮಾತುಗಳನ್ನೂ ಕೂಡ ಹೇಳಿದ್ದಾರೆ.