ಆಸ್ಟ್ರೇಲಿಯಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಬಾಸ್ ಗೆ ಬೈದಿದ್ದಾಳೆ. ಈ ಕಾರಣಕ್ಕೆ ಆಕೆಯನ್ನು ಕೆಲಸದಿಂದ ತೆಗೆಯಲಾಗಿದೆ.
ಆದ್ರೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮಹಿಳೆಗೆ 4 ಲಕ್ಷದ 56 ಸಾವಿರ ರೂಪಾಯಿ ನೀಡುವಂತೆ ಸೂಚನೆ ನೀಡಿದೆ.
ಆಸ್ಟ್ರೇಲಿಯಾ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, 56 ವರ್ಷದ ಮಹಿಳೆಯೊಬ್ಬಳು ಎಲ್ಲರ ಮುಂದೆ ತನ್ನ ಬಾಸ್ ಗೆ ಬೈದಿದ್ದಾಳೆ. ಆಕೆ ವಿಷ್ಯವನ್ನು ಬಾಸ್, ಆಡಳಿತ ಮಂಡಳಿಗೆ ತಿಳಿಸಿದ್ದಾನೆ. ನಂತ್ರ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕಂಪನಿಗೆ ಬುದ್ಧಿ ಕಲಿಸಲು ಮುಂದಾದ ಮಹಿಳೆ, ಕೋರ್ಟ್ ಮೆಟ್ಟಿಲೇರಿದ್ದಾಳೆ. ಕೋರ್ಟ್ ನಲ್ಲಿ ಇದ್ರ ವಿಚಾರಣೆ ನಡೆದಿದೆ.
ವಿಚಾರಣೆ ವೇಳೆ ಮಹಿಳೆ ಬಾಸ್ ಗೆ ಬೈದಿರುವು ದೃಢಪಟ್ಟಿದೆ. ಹಾಗೆ ಇತರ ಸಿಬ್ಬಂದಿ ಜೊತೆ ಮಹಿಳೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಳು ಎಂಬುದು ಗೊತ್ತಾಗಿದೆ. ಕೋರ್ಟ್ ಮಹಿಳೆಯದ್ದೇ ತಪ್ಪು ಎಂದು ತೀರ್ಪು ನೀಡಿದೆ. ಈ ಮಧ್ಯೆ ಕಂಪನಿ ತಪ್ಪನ್ನೂ ಹೇಳಿದೆ. ಕಂಪನಿ, ನೊಟೀಸ್ ನೀಡದೆ ಮಹಿಳೆಯನ್ನು ಕೆಲಸದಿಂದ ತೆಗೆದಿದೆ. ಇದ್ರಿಂದ ಮಹಿಳೆಗೆ ನಷ್ಟವಾಗಿದೆ ಎಂದು ಕೋರ್ಟ್ ಹೇಳಿದೆ. ಇದ್ರ ಜೊತೆಗೆ ಕಂಪನಿ 4 ಲಕ್ಷದ 56 ಸಾವಿರ ರೂಪಾಯಿಯನ್ನು ಮಹಿಳೆಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಸೂಚನೆ ನೀಡಿದೆ.