alex Certify ಮನೆಯೊಳಗೆ ಬಂದ ಹಾವಿಗೆ ಹೊರಹೋಗುವಂತೆ ಮನವಿ ಮಾಡಿದ್ಲು ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೊಳಗೆ ಬಂದ ಹಾವಿಗೆ ಹೊರಹೋಗುವಂತೆ ಮನವಿ ಮಾಡಿದ್ಲು ಮಹಿಳೆ

ತನ್ನ ಮನೆಯ ಕಾಂಪೌಂಡ್‌ ಒಳಗೆ ಪ್ರವೇಶಿಸಿದ ನಾಗರಹಾವಿನ ಮರಿಯೊಂದನ್ನು ಹೊರಹೋಗುವಂತೆ ಶಾಂತ ದನಿಯಲ್ಲಿ ವಿನಂತಿಸಿಕೊಳ್ಳುತ್ತಿರುವ ಮಹಿಳೆಯೊಬ್ಬರ ವಿಡಿಯೋ ವೈರಲ್‌ ಆಗಿದೆ.

ಕೊಯಮತ್ತೂರಿನಲ್ಲಿ ಈ ಘಟನೆ ಜರುಗಿದ್ದು, ಮಕ್ಕಳೊಂದಿಗೆ ಮಾತನಾಡುವಷ್ಟು ಮೃದು ಭಾಷೆಯಲ್ಲಿ ಉರಗದೊಂದಿಗೆ ಸಂವಹನ ನಡೆಸುತ್ತಿರುವ ಈ ಮಹಿಳೆ, ಒಂದು ಚೂರೂ ಗಾಬರಿಯಾಗದೇ ಅದನ್ನು ಗೇಟ್‌ನಿಂದ ಆಚೆ ಹೋಗಲು ಕೋರಿಕೊಂಡಿದ್ದಾರೆ.

ಬಳಿಕ ಸಿಕ್ಕರೆ ಹಾಲುಣಿಸುವುದಾಗಿ ಹಾವಿಗೆ ಮಹಿಳೆ ಮಾತನ್ನೂ ಕೊಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಸಮುದ್ರ ಹಾವಿನ ಸುಂದರ ದೃಶ್ಯ ಕ್ಯಾಮರಾದಲ್ಲಿ ಸೆರೆ

ಆಕೆಯ ಮಾತುಗಳಿಗೆ ಬೆಲೆ ಕೊಡುವಂತೆಯೇ ಕಂಡ ಹಾವು ನಿಧಾನವಾಗಿ ಮನೆಯಿಂದ ಹೊರಗೆ ಹರಿದು ಹೋಗುತ್ತಲೇ, ಮತ್ತೆ ಮನೆಯತ್ತ ಬಾರದಂತೆ ಕೋರಿಕೊಂಡ ಮಹಿಳೆ, ತನ್ನದೇ ಸುರಕ್ಷತೆಯ ಕಾರಣದಿಂದಾಗಿ ಮಾನವರ ಕಣ್ಣಿಗೆ ಬೀಳದಿರುವಂತೆ ಕೇಳಿಕೊಂಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...