ಯುನೈಟೆಡ್ ಕಿಂಗ್ಡಮ್ ನ ಅಲ್ಡೆರ್ನಿಯಲ್ಲಿ ಮಹಿಳೆಯೊಬ್ಬಳು ತನ್ನ ಬಾಸ್ ಮಗುವಿಗೆ ಜನ್ಮ ನೀಡಿದ್ದಾಳೆ. ಕೈಟ್ಲಿನ್ ಕಾಟನ್ ಈಗಾಗಲೇ ಇಬ್ಬರು ಮಕ್ಕಳ ತಾಯಿ. ಕೈಟ್ಲಿನ್ ಗೆ 6 ವರ್ಷ ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ತಾಯಿಯಾಗದ ಕಾರಣ ತುಂಬಾ ನೋವಿನಲ್ಲಿದ್ದ ಬಾಸ್ ಗೆ ಕೈಟ್ಲಿನ್ ನೆರವಾಗಿದ್ದಾಳೆ. ಕರುಣೆ ತೋರಿ ಬಾಸ್ ಮಗುವಿಗೆ ಜನ್ಮ ನೀಡಿದ್ದಾಳೆ.
ಕೇಟ್, ಡಿಜಿಟಲ್ ಮೀಡಿಯಾ ಕಂಪನಿಯ ಮ್ಯಾನೇಜರ್. ಕೈಟ್ಲಿನ್ ಮಾರ್ಕೆಟಿಂಗ್ ಅಸಿಸ್ಟೆಂಟ್. ಕೇಟ್, ಮೂರು ಬಾರಿ ಗರ್ಭ ಧರಿಸಿದ್ದರೂ ಮಗುವಿಗೆ ಜನ್ಮ ನೀಡಲು ಆಗಲಿಲ್ಲ. ಇಬ್ಬರು ಮಕ್ಕಳು ಸತ್ತು ಹುಟ್ಟಿದ್ದರೆ ಒಂದು ಗರ್ಭಪಾತವಾಗಿತ್ತು. ತಾಯಿಯಾಗದೆ ದುಃಖದಲ್ಲಿದ್ದ ಕೇಟ್ ಗೆ ಬಾಡಿಗೆ ತಾಯಿ ಬಗ್ಗೆ ಆಲೋಚನೆ ಬಂದಿತ್ತು. ಈ ಬಗ್ಗೆ ಕೈಟ್ಲಿನ್ ಗೆ ಹೇಳಿದ್ದಳು. ಕೈಟ್ಲಿನ್ ಬಾಡಿಗೆ ತಾಯಿಯಾಗಲು ಒಪ್ಪಿದಳು.
ಆಕೆ ಸಹೋದ್ಯೋಗಿಗಳು ಬೆಸ್ಟ್ ಎಂಪ್ಲಾಯ್ ಆಫ್ ದಿ ಮಂತ್ ಪಡೆಯಲು ಕೈಟ್ಲಿನ್ ಇದನ್ನೆಲ್ಲ ಮಾಡಿದ್ದಾಳೆಂದು ಗೇಲಿ ಮಾಡ್ತಿದ್ದರಂತೆ. ಆದ್ರೆ ಕೇಟ್ ನೋವು ನೋಡಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ನಿರ್ಧಾರ ಕೈಗೊಂಡಿದ್ದೆ ಎಂದು ಕೈಟ್ಲಿನ್ ಹೇಳಿದ್ದಾರೆ. ಕೈಟ್ಲಿನ್ ನನ್ನ ಸ್ನೇಹಿತೆಯಲ್ಲ, ನಮ್ಮ ಮನೆಯಲ್ಲಿ ಒಬ್ಬಳಾಗಿದ್ದಾಳೆ. ಆಕೆಗೆ ಏನು ನೆರವು ನೀಡಲೂ ನಾನು ಸಿದ್ಧವೆಂದು ಕೇಟ್ ಹೇಳಿದ್ದಾಳೆ.