ಮಥುರಾ: ಮಥುರಾದಲ್ಲಿ ಮಹಿಳೆಯೊಬ್ಬರ ಮೇಲೆ ನಾಲ್ವರು ಅತ್ಯಾಚಾರ ಎಸಗಿದ ಘಟನೆಯ ವಿಡಿಯೋ ಮಾಡಿ ಆಕೆಯ ಅತ್ತೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮಹಿಳೆ ಮೇ 28 ರಂದು ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ತುಂಬಲು ಸಾರ್ವಜನಿಕ ಸೇವಾ ಕೇಂದ್ರಕ್ಕೆ ಹೋಗಿದ್ದಾಗ ಕೇಂದ್ರದ ನಿರ್ವಾಹಕ, ಕಂಪ್ಯೂಟರ್ ಆಪರೇಟರ್, ಅಂಗಡಿ ಮಾಲೀಕ ಮತ್ತು ಇನ್ನೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.
ಆರೋಪಿಗಳಲ್ಲಿ ಒಬ್ಬರು ಮಹಿಳೆಯ ಅತ್ತೆಗೆ ವಿಡಿಯೋ ಕಳುಹಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಎಸ್ಪಿ(ಗ್ರಾಮೀಣ) ಶ್ರೀಶ್ ಚಂದ್ರ ಹೇಳಿದ್ದಾರೆ.
ಪ್ರಮುಖ ಆರೋಪಿಯು ಮಹಿಳೆಯ ಪೋಷಕರು ವಾಸಿಸುತ್ತಿದ್ದ ಅಲಿಗಢ ಜಿಲ್ಲೆಯ ಅದೇ ಹಳ್ಳಿಗೆ ಸೇರಿದವರು.. ಮಹಿಳೆ ಮತ್ತು ಆರೋಪಿ ಕೂಡ ಒಟ್ಟಿಗೆ ಓದಿದ್ದರು ಎಂದು ತಿಳಿಸಿದ್ದಾರೆ.