ಮಿಸಿಸಿಪ್ಪಿಯಲ್ಲಿರುವ ಸಫಾರಿ ಪಾರ್ಕ್‌ಗೆ ಮಹಿಳೆಯೊಬ್ಬರು ತನ್ನ ಸ್ನೇಹಿತನೊಂದಿಗೆ ಭೇಟಿ ನೀಡಿದಾಗ ಆಸ್ಟ್ರಿಚ್ ಆಕೆಯನ್ನು ಗಾಬರಿ ಬೀಳಿಸಿದೆ.
ಆಹಾರ ಹುಡುಕುತ್ತಿದ್ದ ಆಸ್ಟ್ರಿಚ್ ಕಾರಿನ ಕಿಟಕಿಯೊಳಗೆ ತಲೆ ತೂರಿಸಿದ್ದರಿಂದ ಆಕೆ ಒಂದು ಕ್ಷಣ ಗಾಬರಿಗೊಂಡಿದ್ದು ಈ ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಕ್ಲೋಯ್ ಬೆನ್‌ಹ್ಯಾಮ್ ಮಿಸಿಸಿಪ್ಪಿಯ ಕೊಮೊದಲ್ಲಿರುವ ಸಫಾರಿ ವೈಲ್ಡ್ ಅನಿಮಲ್ ಪಾರ್ಕ್‌ಗೆ ತನ್ನ ಸ್ನೇಹಿತ ಸ್ಟೀಫನ್ ಮಲೋನ್ ಜೊತೆ ಭೇಟಿ ನೀಡಿದ್ದಳು.
BIG NEWS: ಅಗ್ನಿಪಥ್ ಯೋಜನೆ ಮೊದಲ ವರ್ಷದ ಸೇನಾ ನೇಮಕಾತಿಗೆ ವಯೋಮಿತಿ ಹೆಚ್ಚಳ
ಅವಳ ಕೈಯಲ್ಲಿ ಜೋಳದ ಬ್ಯಾಗ್ ಇತ್ತು. ಹಾಗೆಯೇ ಅವಳ ಕಾರಿನ ಕಿಟಕಿ ಕೂಡ ತೆರೆದಿತ್ತು. ಆಸ್ಟ್ರಿಚ್ ನೇರವಾಗಿ ಬ್ಯಾಗ್‌ನತ್ತ ತನ್ನ ಮುಖ ಚಾಚಿತು. ಅದರಲ್ಲಿದ್ದ ಜೋಳವನ್ನು ಹೆಕ್ಕಲು ಪ್ರಯತ್ನಿಸಿತು. ಇದು ಕ್ಲೋಯ್‌ನನ್ನು ವಿಚಲಿತಗೊಳಿಸಿದೆ. ಆಕೆ ಗಾಬರಿಗೊಂಡು ಜೋರಾಗಿ ಕಿರುಚುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕ್ಲೋಯ್ ತನ್ನ ಅನುಭವವನ್ನು ಹಂಚಿಕೊಂಡಿದ್ದು, ಮುಂದೆ ಸಫಾರಿ ಹೋಗುವಾಗ ಮಾಡಿಕೊಳ್ಳಬೇಕಾದ ಸಿದ್ಧತೆ ಬಗ್ಗೆ ತಿಳಿಸಿದ್ದಳು. ಜೊತೆಗಿದ್ದ ಸ್ಟೀಫನ್ ಕೂಡ ಪ್ರತಿಕ್ರಿಯೆ ನೀಡಿ, ಕ್ಲೋಯ್ ಸಾಕು ಪ್ರಾಣಿಗಳ ನಡುವೆ ಬೆಳೆದವಳು ಮತ್ತು ಮೇಕೆಗಳನ್ನು ಹೆಚ್ಚು ಪ್ರೀತಿಸುತ್ತಿದ್ದಳು, ಆದ್ದರಿಂದ ಅವಳು ತುಂಬಾ ಉತ್ಸುಕಳಾಗಿದ್ದಳು. ಆಸ್ಟ್ರಿಚ್ ಗೆ ಇಷ್ಟೊಂದು ಹೆದರುತ್ತಾಳೆ ಎಂದು ಎಣಿಸಿರಲಿಲ್ಲ ಎಂದು ಹೇಳಿದರು.