ಅನೇಕ ಬಾರಿ ಆಘಾತಕಾರಿ ಸಂಗತಿಗಳು ನಮ್ಮ ಮುಂದೆ ಬರುತ್ತವೆ. ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಟಿಕ್ ಟಾಕ್ ಸ್ಟಾರ್ ಅವಾ ಲೂಯಿಸ್ ಜೀವನದಲ್ಲೂ ಇದೇ ಆಗಿದೆ. ಅವಾ ಲೂಯಿಸ್ ಗೆ 22 ವರ್ಷ. ಶುಗರ್ ಡ್ಯಾಡಿ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಶ್ರೀಮಂತ ವೃದ್ಧನನ್ನು ಹುಡುಕಿದ್ದಳು. ಆದ್ರೆ ಆಕೆ ಕಣ್ಣಿಗೆ ಕಂಡಿದ್ದು, ಆಕೆ ತಂದೆಯ ಪ್ರೊಫೈಲ್.
ಈ ಘಟನೆಯನ್ನು ಟಿಕ್ ಟಾಕ್ ನಲ್ಲಿ ಅವಾ ಹಂಚಿಕೊಂಡಿದ್ದಾಳೆ. ಇದು ತುಂಬಾ ಗೊಂದಲದ ಅನುಭವ ಎಂದು ಆಕೆ ಹೇಳಿದ್ದಾಳೆ.
ಶ್ರೀಮಂತ ಪುರುಷರೊಂದಿಗೆ ಡೇಟಿಂಗ್ ಮಾಡಲು ತಾನು ಈ ವೆಬ್ಸೈಟ್ ಬಳಸುತ್ತಿದ್ದೇನೆ. ಶ್ರೀಮಂತ ಪುರುಷರ ಡೇಟಿಂಗ್ ಮಾಡಿದ್ರೆ ದುಬಾರಿ ಉಡುಗೊರೆ ಸಿಗುತ್ತದೆ. ಆದ್ರೆ ಹುಡುಕಾಟದ ವೇಳೆ ತಂದೆ ಪ್ರೊಫೈಲ್ ಸಿಕ್ಕಿದೆ. ಇದು ನನಗೆ ಆಘಾತ ನೀಡಿದೆ ಎಂದಿದ್ದಾಳೆ.
ವಿದೇಶದಲ್ಲಿರುವ ಹಿರಿಯ ಶ್ರೀಮಂತರು ತಮಗಿಂತ ಚಿಕ್ಕ ವಯಸ್ಸಿನ ಹುಡುಗಿಯರನ್ನು ಡೇಟಿಂಗ್ ಮಾಡಲು ಇಷ್ಟಪಡುತ್ತಾರೆ. ಇದಕ್ಕಾಗಿ ವೆಬ್ಸೈಟ್ ಇದೆ. ಹಿರಿಯ ಪುರುಷ ಮತ್ತು ಕಿರಿಯ ಹುಡುಗಿಯ ನಡುವಿನ ಡೇಟಿಂಗ್ ಸಂಬಂಧವನ್ನು ಶುಗರ್ ಡ್ಯಾಡಿ ಡೇಟಿಂಗ್ ಎಂದು ಕರೆಯಲಾಗುತ್ತದೆ. ದುಬಾರಿ ಉಡುಗೊರೆಗಳು ಮತ್ತು ಉತ್ತಮ ಜೀವನಶೈಲಿಗಾಗಿ ಹುಡುಗಿಯರು ಅಂತಹ ಸಂಬಂಧ ಒಪ್ಪಿಕೊಳ್ತಾರೆ. ಅವಾ ಲೂಯಿಸ್ ಈ ಡೇಟಿಂಗ್ ವೆಬ್ಸೈಟ್ ಅದೇ ಉದ್ದೇಶಕ್ಕಾಗಿ ಬಳಸುತ್ತಾಳೆ.
ತಂದೆಯ ಪ್ರೊಫೈಲ್ ನೋಡಿದ ಅವಾ, ಹಾಯ್ ಡ್ಯಾಡಿ ಎಂಬ ಸಂದೇಶ ಕಳುಹಿಸಿದ್ದಾಳೆ. ಅದಕ್ಕೆ ಪ್ರತಿಯಾಗಿ ಅವಳನ್ನು ತಂದೆ ಬ್ಲಾಕ್ ಮಾಡಿದ್ದಾರಂತೆ. ಈ ಬಗ್ಗೆ ಏನೂ ಮಾತನಾಡಿಲ್ಲವಂತೆ. ತಾಯಿಗೆ ಈ ವಿಷ್ಯ ಹೇಳಿದ್ರೆ, ತಾಯಿ ತಂದೆ ನನಗೆ ದುಬಾರಿ ಬ್ರೇಸ್ಲೆಟ್ ತಂದಿದ್ದಾನೆ ಎಂದಳಂತೆ.
ಅವಾ ಶೇರ್ ಮಾಡಿರುವ ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಅನೇಕರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.