ಬೆಂಗಳೂರು : ಬಲವಂತವಾಗಿ ಮಹಿಳಾ ಪ್ರಯಾಣಿಕರೊಬ್ಬರು ಬಿಎಂಟಿಸಿ ಕಂಡಕ್ಟರ್ ಟೋಪಿ ತೆಗೆಸಿದ ಘಟನೆ ನಡೆದಿದ್ದು. ವಿಡಿಯೋ ವೈರಲ್ ಆಗಿದೆ. ಮೊಹಮದ್ ಹನೀಫ್ ಎಂಬುವವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಮುಸ್ಲಿಂ ಕಂಡಕ್ಟರ್ ಬಿಎಂಟಿಸಿ ಬಸ್ ನಲ್ಲಿ ಟೋಪಿ ಧರಿಸಿದ್ದು, ಇದನ್ನು ಮಹಿಳೆ ಪ್ರಶ್ನಿಸಿದ್ದಾರೆ. ಸರ್, ನಿಮ್ಮ ನಿಯಮಗಳ ಪ್ರಕಾರ ಈ ಕ್ಯಾಪ್ ಧರಿಸಲು ನಿಮಗೆ ಅನುಮತಿ ಇದೆಯೇ? ಎಂದು ಮಹಿಳೆ ಪ್ರಶ್ನಿಸಿದ್ದಾಳೆ. ಅದಕ್ಕೆ ಕಂಡಕ್ಟರ್ ನಾನು ಇದನ್ನು ಬಹಳ ವರ್ಷಗಳಿಂದ ಧರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಮಹಿಳೆ ನೀವು ಬಹಳ ವರ್ಷಗಳಿಂದ ಅದನ್ನು ಧರಿಸುತ್ತಿದ್ದೀರಿ ಎಂಬುದು ಬೇರೆ ವಿಷಯ. ನೀವು ಮನೆಯಲ್ಲಿ ನಿಮ್ಮ ಧರ್ಮವನ್ನು ಆಚರಿಸಿ, ಅದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ನೀವು ಸರ್ಕಾರಿ ಉದ್ಯೋಗಿಯಾಗಿ ಬಸ್ ನಲ್ಲಿ ನೀವು ಟೋಪಿ ಧರಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ಮಹಿಳೆಯ ಎಲ್ಲಾ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿದ ಕಂಡಕ್ಟರ್ ಕೊನೆಗೆ ಟೋಪಿ ರಿಮೂವ್ ಮಾಡುತ್ತಾರೆ. ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ. ಪರ ವಿರೋಧ ಕಮೆಂಟ್ ಗಳು ಬರುತ್ತಿದೆ.