ಬಾಲೆಯ ಕೈಯನ್ನು ಕುದಿಯುತ್ತಿರುವ ಎಣ್ಣೆಯ ಬಾಣಲೆಗೆ ಹಾಕಿರುವ ದಾರುಣ ಘಟನೆ ಗುಜರಾತಿನ ಪಠಾಣ್ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೋಲಿಸ್ ಬಂಧಿಸಿದ್ದಾರೆ. ಆರೋಪಿ ಮತ್ತು ಬಾಲೆಯು ನೆರೆಹೊರೆಯವರಾಗಿದ್ದಾರೆ.
ಆರೋಪಿ ಲಖಿ ಮಕ್ವಾನ ಮತ್ತು ಈ ಹನ್ನೊಂದು ವರ್ಷದ ಬಾಲೆಯು ಒಬ್ಬರಿಗೊಬ್ಬರು ಬಲ್ಲವರಾಗಿದ್ದಾರೆ. ಇತ್ತೀಚಿಗೆ, ಲಖಿ ಆಗುಂತಕನೊಬ್ಬನ ಜೊತೆ ಮಾತನಾಡುತ್ತಿರುವುದನ್ನು ಬಾಲಕಿ ನೋಡಿದ್ದಾಳೆ ಎನ್ನಲಾಗಿದೆ.
ಸಿಹಿ ಖಾದ್ಯಕ್ಕೆ ಹೊಸ ಟಚ್: ಗುಲಾಬ್ ಜಾಮೂನ್ ಅಲ್ಲ ರಮ್ ಬಾಲ್..!
ಇದನ್ನು ಗಮನಿಸಿದ ಲಖಿ, ಆ ಹುಡುಗಿಯನ್ನು ಕರೆದು ಇದನ್ನು ಯಾರಿಗಾದರೂ ಹೇಳಿದ್ದೀಯಾ ಎಂದು ಕೇಳಿದಾಗ, ಹುಡುಗಿಯು ಇಲ್ಲವೆಂದು ಹೇಳಿದ್ದಾಳೆ. ಆದರೂ ಗುಮಾನಿ ಬಿಡದೆ, ಲಖಿ ಪದೇ ಪದೇ ಕೇಳಿ, ಕುದಿಯುತ್ತಿರುವ ಎಣ್ಣೆ ಬಾಣಲೆಗೆ ಹುಡುಗಿಯ ಕೈ ಹಾಕಿದ್ದಾಳೆ.
ಈ ಘಟನೆ ನಡೆದ ಮೇಲೆ, ಮತ್ತೋರ್ವ ನೆರೆಯವರು ಹುಡುಗಿಯ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ, ಹುಡುಗಿಯು ಸುಟ್ಟುಹೋದ ಅಂಗೈ ತೋರಿಸಿ, ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗಿ , ಗುಜರಾತ್ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ಥಳೀಯ ಜಿಲ್ಲಾಧಿಕಾರಿಗೆ ವಿಚಾರಣೆ ನಡೆಸಿ, ವರದಿ ಕೊಡುವಂತೆ ನಿರ್ದೇಶಿಸಿದೆ. ಆ ನಂತರ ಹುಡುಗಿಯ ತಂದೆ ಲಖಿ ವಿರುದ್ಧ ದೂರನ್ನು ಕೂಡ ದಾಖಲಿಸಿದ್ದಾರೆ, ಲಖಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಕೊನೆಗೆ ಆಕೆಯನ್ನು ಸಂತಲ್ಪುರ್ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.