ಒಳ್ಳೆಯ ಸಂಗಾತಿ ಆಯ್ಕೆ ಸುಲಭವಲ್ಲ. ಈಗ ಅನೇಕ ಅಪ್ಲಿಕೇಷನ್ ಗಳು ಸಂಗಾತಿ ಹುಡುಕಾಟಕ್ಕೆ ನೆರವಾಗ್ತಿವೆ. ಕೆಲವೊಮ್ಮೆ ಹೆಕ್ಕಿ-ತೆಗೆದು ಆಯ್ಕೆ ಮಾಡಿಕೊಂಡ್ರೂ ಸಂಗಾತಿ ಜೊತೆ ಜೀವನ ನಡೆಸುವಾಗ್ಲೇ ಅವರ ಬಣ್ಣ ಬಯಲಾಗುತ್ತದೆ. ಸ್ವಭಾವ ತಿಳಿಯುತ್ತದೆ.
ಆದ್ರೆ ಆಸ್ಟ್ರೇಲಿಯಾದ ಹುಡುಗಿಯೊಬ್ಬಳಿಗೆ ಮದುವೆಗೆ ಮೊದಲೇ ಸಂಗಾತಿ ಸ್ವಭಾವ ತಿಳಿಯುವ ಅವಕಾಶ ಸಿಕ್ಕಿದೆ. ಇದಕ್ಕೆಲ್ಲ ಕಾರಣವಾಗಿದ್ದು ಕೊರೊನಾ.
ಆಸ್ಟ್ರೇಲಿಯಾದ ಹುಡುಗಿ ಸಾರಾ ಟಿಕ್ ಟಾಕ್ ನಲ್ಲಿ ತನ್ನ ಕಥೆ ಹಂಚಿಕೊಂಡಿದ್ದಾಳೆ. ಆಕೆ ಡೇಟಿಂಗ್ ಆಪ್ ಟಿಂಡರ್ ನಲ್ಲಿ ಒಬ್ಬ ಹುಡುಗನನ್ನು ಆಯ್ಕೆ ಮಾಡಿದ್ದಳು. ಇಬ್ಬರೂ ಅಧಿಕೃತವಾಗಿ ಸಂಬಂಧಕ್ಕೆ ಬಂದಿರಲಿಲ್ಲ. ಈ ಮಧ್ಯೆ ಸಾರಾಗೆ ಒಮಿಕ್ರೋನ್ ಇರುವುದು ಗೊತ್ತಾಗಿದೆ. ಆಕೆ ಐಸೋಲೇಟ್ ಆಗುವ ನಿರ್ಧಾರಕ್ಕೆ ಬಂದಿದ್ದಾಳೆ. ಈ ವಿಷ್ಯವನ್ನು ತನ್ನ ಟೇಡಿಂಗ್ ಅಪ್ಲಿಕೇಷನ್ ಪಾಲುದಾರನಿಗೆ ಹೇಳಿದ್ದಾಳೆ. ಜೊತೆಗೆ ತನ್ನ ಜೊತೆ ಐಸೋಲೇಟ್ ಆಗುವಂತೆ ಕೇಳಿದ್ದಾಳೆ. ಇದಕ್ಕೆ ಒಪ್ಪಿದ ಹುಡುಗ ಸಾರಾ ಮನೆಗೆ ಬಂದಿದ್ದಾನೆ.
ಇಬ್ಬರು 7 ದಿನಗಳನ್ನು ಒಟ್ಟಿಗೆ ಕಳೆದಿದ್ದಾರೆ. ಮನೆಯಲ್ಲಿ ಬಂಧಿಯಾಗಿದ್ದ ಅವರು ಸಾಕಷ್ಟು ಎಂಜಾಯ್ ಮಾಡಿದ್ದಾರೆ. ಅನೇಕ ಆಟಗಳನ್ನು ಆಡಿದ್ದು, ಒಟ್ಟಿಗೆ ಒಂದಿಷ್ಟು ಬಟ್ಟೆ ತೊಳೆದಿದ್ದೇವೆಂದು ಸಾರಾ ಹೇಳಿದ್ದಾಳೆ. ಆದ್ರೆ ನಾವು ಯಾವುದೇ ದೈಹಿಕ ಸಂಬಂಧ ಬೆಳೆಸಿರಲಿಲ್ಲವೆಂದೂ ಸಾರಾ ವಿಡಿಯೋದಲ್ಲಿ ಹೇಳಿದ್ದಾಳೆ. ಸಾರಾ ಈ ವಿಡಿಯೋವನ್ನು 30 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.