ಹೆಣ್ಣು ಮಗುವೊಂದನ್ನು ದತ್ತು ಪಡೆದ ಕೆಲವೇ ದಿನಗಳಲ್ಲಿ ತನ್ನ ಹೆತ್ತವರ ಒತ್ತಡದಿಂದಾಗಿ ಆ ಮಗುವನ್ನು ಕಳೆದುಕೊಳ್ಳಬೇಕಾದ ನೋವಿನ ಸಂಗತಿಯನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ.
ಸಾರಾ ಹೊವೆಲ್ ಹೆಸರಿನ ಇವರು ವೃತ್ತಿಯಲ್ಲಿ ನರ್ಸ್ ಆಗಿದ್ದಾರೆ. ತನಗೆ ಸಹಜವಾಗಿ ಮಗು ಜನಿಸುವ ಸಾಧ್ಯತೆ ಬರೀ 1% ಮಾತ್ರವೇ ಇರುವುದನ್ನು ಕೇಳಿ ಮನನೊಂದುಕೊಂಡಿದ್ದ ಸಾರಾ ತಾಯಿಯಾಗುವ ಸ್ಪೂರ್ತಿಯನ್ನು ಕಳೆದುಕೊಂಡಿರಲಿಲ್ಲ.
ಮಗುವೊಂದನ್ನು ದತ್ತು ಪಡೆಯಲು ತನ್ನ ಪತಿಯೊಂದಿಗೆ ಚರ್ಚಿಸಿದ ಸಾರಾ ಹಸುಗೂಸೊಂದನ್ನು ದತ್ತು ಪಡೆಯಲು ಮುಂದಾಗಿದ್ದರು. ಆದರೆ ಮಗುವನ್ನು ದತ್ತು ಪಡೆದು ಮನೆಗೆ ಕರೆದೊಯ್ಯುತ್ತಲೇ ಸಾರಾಗೆ ಸಹಜವಾಗೇ ಗರ್ಭಧಾರಣೆಯಾದ ವಿಚಾರ ತಿಳಿದುಬಂದಿದೆ.
ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್: ನಾಳೆಯಿಂದಲೇ ಬೆಲೆ ಏರಿಕೆ
ಇದರಿಂದಾಗಿ ದತ್ತು ಮಗುವಿನ ಹೆತ್ತವರು ತಮ್ಮ ಮಗು ತಮಗೆ ಮರಳಿ ಬೇಕೆಂದು ಆಸ್ಪತ್ರೆಗೆ ಬಂದಿದ್ದಾರೆ. ಇದರಿಂದ ದತ್ತು ಪಡೆದಿದ್ದ ಮಗುವನ್ನು ಸಾರಾ ಅವರಿಗೆ ಮರಳಿಸಿದ್ದಾರೆ.
ದತ್ತು ಮಗುವನ್ನು ಮರಳಿ ಕೊಟ್ಟ ಬಳಿಕ ಬಹಳ ನೋವಿನಲ್ಲಿದ್ದ ಸಾರಾಗೆ, ಈ ನೋವಿನಿಂದಲೇ ತನ್ನ ಗರ್ಭಕ್ಕೆ ಹಾನಿಯಾಗುವ ಭೀತಿ ಮೂಡಿತ್ತು. “ಆಕೆಯನ್ನು ಮತ್ತೆ ನೋಡುವುದೇ ಇಲ್ಲವೆಂದು ನಾವು ಅಂದುಕೊಂಡಿದ್ದೆವು, ಇದರಿಂದ ಒಂದು ರೀತಿಯ ಸಾವಿನಂಥ ಭಾವ ಆವರಿಸಿತ್ತು. ಆದರೆ ನಮಗೆ ಆ ಮಗುವಿನ ಹೆತ್ತವರ ವಿರುದ್ಧ ಯಾವುದೇ ಮನಸ್ತಾಪ ಮೂಡಲಿಲ್ಲ. ಸಾಧ್ಯವಿದ್ದರೆ ನಾವು ಅವರನ್ನು ಎಷ್ಟು ಪ್ರೀತಿಸುತ್ತೇವೆ ಎಂದಷ್ಟೇ ಹೇಳಬಹುದಿತ್ತು, ಹಾಗೂ ಅವರನ್ನು ಹೆತ್ತವರನ್ನಾಗಿ ಪಡೆದ ಆ ಮಗು ಅದೆಷ್ಟು ಅದೃಷ್ಟವಂತೆ ಎಂದು ತಿಳಿಸಬಹುದಿತ್ತು” ಎಂದು ಸಾರಾ ತಿಳಿಸಿದ್ದಾರೆ.
ಅದೃಷ್ಟವಶಾತ್ ಸಾರಾ ಈಗ ಉತ್ತಮವಾದ ಮನಃಸ್ಥಿತಿಯಲ್ಲಿದ್ದು, ಮಗ ನೋವಾಹ್ ಹೊವೆಲ್‌ಗೆ ಜನ್ಮ ನೀಡಿದ್ದಾರೆ. ಅದರ ಬಳಿಕವೂ ಸಾರಾ ಹಾಗೂ ಅವರ ಪತಿ ಒಂದು ವರ್ಷದ ಲೆವಿ ಹೆಸರಿನ ಮಗುವೊಂದನ್ನು ದತ್ತು ಪಡೆದಿದ್ದಲ್ಲದೇ, ಎರಡು ತಿಂಗಳ ಮಗುವೊಂದರ ಪಾಲನೆಯ ಹೊಣೆ ಹೊತ್ತಿದ್ದಾರೆ.